ನವದೆಹಲಿ: ಮಂತ್ರಿ ಆಗುವ ಹೆಚ್. ವಿಶ್ವನಾಥ್ ಅವರಿಗೆ ನಿರಾಸೆ ಆಗಿದೆ.
ನಾಮ ನಿರ್ದೇಶನದ ಮೂಲಕ ಶಾಸಕನಾಗಿರುವ ಹೆಚ್. ವಿಶ್ವನಾಥ್ ಸಚಿವನಾಗಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಶಾಸಕರು ತಮ್ಮ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿ ಪಕ್ಷ ಸೇರಿದ ಸಂದರ್ಭದಲ್ಲಿ, ಇವರೆಲ್ಲರು ನೇರವಾಗಿ ಆಯ್ಕೆಯಾದರೆ ಮಾತ್ರ ಸಚಿವರಾಗಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.
ಆದರೆ ವಿಶ್ವನಾಥ್ ಸಾಹಿತಿ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದರು.
ಶಾಸಕರಾಗಿ ನೇರವಾಗಿ ಆಯ್ಕೆಯಾದರೆ ಮಾತ್ರ ಸಚಿವರಾಗಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ವಿಶ್ವನಾಥ್ ಹೈಕೋರ್ಟ್ ಮೆಟ್ಟಿರೆರಿದ್ದರು.
ಹೈಕೋರ್ಟ್ ಸುಪ್ರೀಂ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿತ್ತು.
ಮತ್ತೆ ವಿಶ್ವನಾಥ್ ಅವರು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ವಿಶ್ವನಾಥ್ ಸಲ್ಲಿಸಿದ್ದ ಮನವಿ ಕುರಿತು ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಎ.ಎಸ್.ಬೊಬ್ಡೆ ಅವರಿದ್ದ ವಿಭಾಗೀಯ ಪೀಠ ಗುರುವಾರ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು, ಪಕ್ಷಾಂತರ ಮಾಡಿದವರು ನೇರವಾಗಿ ಆಯ್ಕೆಯಾಗದೆ ನಾಮ ನಿರ್ದೇಶನದ ಮೂಲಕ ನೇಮಕಗೊಂಡು ಮಂತ್ರಿ ಆಗಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸಚಿವನಾಗಬೇಕೆಂಬ ಹೆಚ್. ವಿಶ್ವನಾಥ್ ಗೆ ನಿರಾಸೆ

