ಬೋಧನಾ ಶುಲ್ಕದಲ್ಲಿ ಶೇ. 30ರಷ್ಟು ಕಡಿತ -ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಟ್ಯೂಷನ್ ಫಿಸ್ ಹೊರತಾಗಿ ಇತರೆ ಯಾವುದೇ ವಂತಿಗೆ, ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ

ಬೆಂಗಳೂರು: 2019-20ನೇ ಸಾಲಿನಲ್ಲಿ ಶೇ. 70ರಷ್ಟು ಬೋಧನಾ ಶುಲ್ಕವನ್ನು ಮಾತ್ರ ಪಡೆಯಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶಿಕ್ಷಣ ಸಚಿವರು ಮಾತನಾಡಿದರು.
ಸಿಬಿಎಸ್‍ಸಿ, ಐಸಿಎಸ್ಸಿ ಹಾಗೂ ಸ್ಟೇಟ್ ಸಿಲೆಬಸ್ ಪಠ್ಯವನ್ನು ಬೋಧಿಸುವ ಎಲ್ಲ ಖಾಸಗಿ ಶಾಲೆಗಳು 2019-20ನೇ ಸಾಲಿನಲ್ಲಿ ಶೇ. 70ರಷ್ಟು ಬೋಧನಾ ಶುಲ್ಕ ಪಡೆಯಬೇಕು. ಇದರ ಹೊರತಾಗಿ ಉಳಿದ ಯಾವುದೇ ಅಭಿವೃದ್ಧಿ ಶುಲ್ಕ, ವಂತಿಗೆ ಪಡೆಯುವಂತಿಲ್ಲ ಎಂದು ಆದೇಶಿಸಲಾಗಿದೆ ಎಮದು ಸುರೇಶ್ ಕುಮಾರ್ ಅವರು ಹೇಳಿದರು.
ಸದ್ಯಕ್ಕೆ ನಿಗದಿಪಡಿಸಿರುವ ಶುಲ್ಕವನ್ನು ಎರಡು ಇಲ್ಲವೇ ಮೂರು ಕಂತುಗಳಲ್ಲಿ ಪಾವತಿಸಲು ಪೆÇೀಷಕರಿಗೆ ಅವಕಾಶ ನೀಡಬೇಕು. ಈ ಆದೇಶವನ್ನು ಸರಕಾರ ಮೀರುವಂತಿಲ್ಲ ಎಂದವರು ತಿಳಿಸಿದರು.
ಶಾಲೆಗಳು ಮತ್ತು ಪೆÇೀಷಕರಿಂದ ಬರುವ ದೂರುಗಳ ನಿರ್ವಹಣೆಗೆ ಪ್ರತಿ ಜಿಲ್ಲೆ, ರಾಜ್ಯದ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಸಮಾಲೋಚನೆ ನಡೆಸಿದ ನಂತರ ನಿರ್ಧಾರ ಕೈಗೊಳ್ಳಲಾಗಿದೆ. ಕೋವಿಡ್ ಸಂಕಷ್ಟದಿಂದ ಪೆÇೀಷಕರು, ಶಾಲೆಗಳ ಆಡಳಿತ ಮಂಡಳಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನ ನೀಡುವುದಕ್ಕೂ ಕಷ್ಟವಾದ ಪರಿಸ್ಥಿತಿ ಇದೆ ಎಂದು ಸುರೇಶ್ ಕುಮಾರ್ ಹೇಳಿದರು.
ಈಗಾಗಲೇ ಪೂರ್ಣ ಪ್ರಮಾಣದ ಬೋಧನಾ ಶುಲ್ಕವನ್ನು ಪಾವತಿಸಿದ್ದರೆ ಯೋಚನೆ ಮಾಡಬೇಕಿಲ್ಲ. ಅಂಥ ವಿದ್ಯಾರ್ಥಿಗಳು ಮುಂದಿನ ವರ್ಷ ಒಟ್ಟಾರೆ ಬೋಧನಾ ಶುಲ್ಕದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಈ ಬಗ್ಗೆ ಎಲ್ಲ ಖಾಸಗಿ ಶಾಲೆಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು ಸುರೇಶ್ ಕುಮಾರ್ ಹೇಳಿದರು.
ಈ ಮೂಲಕ ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ಫುಲ್ ಫೀಸ್ ವಸೂಲಿ ಮಾಡುವ ಖಾಸಗಿ ಶಾಲೆಗಳ ವರಸೆಗೆ ಸರಕಾರ ಕಡಿವಾಣ ಹಾಕಿದೆ.
ಪೆÇೀಷಕರು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.