ಇಂದು ಶ್ರೀ ದ.ರಾ.ಬೇಂದ್ರೆ ಅವರ 125ನೇ ಜನುಮದಿನ….
ಡಾ. ಗುರುಪ್ರಸಾದ ಎಚ್ .ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
“ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ.
ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, “ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ” ಎಂದು ನೋವನ್ನು ಸಹ ಕಾವ್ಯಮಯ ಮಾಡಿದ ಶ್ರೇಷ್ಠ ನುಡಿಗಾರುಡಿಗ ಕವಿ ದ.ರಾ.ಬೇಂದ್ರೆಯವರು.
ವರಕವಿ ದ.ರಾ.ಬೇಂದ್ರೆಯವರ ಜೀವನದಲ್ಲಿ ನೊಂದು ಬೆಂದು ಬಳಲಿದವರಾದರೂ ಕಾವ್ಯದ ಮೂಲಕವಾಗಿ ಮಿಂಚಿದ ರತ್ನವೆನಿಸಿದ್ದಾರೆ.
ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಬೇಂದ್ರೆಯವರು ಧಾರವಾಡದಲ್ಲಿ 1886ರ ಜನವರಿ 31ರಂದು ಜನಿಸಿದರು. ಇವರ ತಂದೆ ರಾಮಚಂದ್ರ ಬೇಂದ್ರೆ ಹಾಗೂ ತಾಯಿ ಅಂಬವ್ವ.
ಅಂಬಿಕಾತನಯದತ್ತ ಎಂಬ ಕಾವ್ಯನಾಮದೊಂದಿಗೆ ಧಾರವಾಡ ಹಾಗೂ ಸಾಧನಕೇರಿಯ ಪ್ರದೇಶವನ್ನು ನೆಲೆಯಾಗಿಸಿ ಅವರು ಸಾಹಿತ್ಯ ಕೃಷಿ ನಡೆಸಿದರು.
ಧಾರವಾಡದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಬೇಂದ್ರೆಯವರು ಮಹಾರಾಷ್ಟ್ರದ ಪುಣೆಯಲ್ಲಿ ಪದವಿ ಪೂರೈಸಿದರು. ಕರ್ನಾಟಕದ ಗದುಗಿನಲ್ಲಿ ಕೆಲಕಾಲ ಮುಖ್ಯಾಧ್ಯಾಪಕರಾಗಿದ್ದರು. ಬಳಿಕ ಎಂ.ಎ. ಪದವಿ ಪಡೆದು ಧಾರವಾಡದ ವಿಕ್ಟೋರಿಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು.
ಗೆಳೆಯರ ಬಳಗ ಎಂಬ ಸಾಹಿತ್ಯ ರಸಿಕರ ಕೂಟವನ್ನು ರಚಿಸಿದರು. ಅಂಬಿಕಾತನಯ ದತ್ತರ ಪ್ರಮುಖ ಕೃತಿಗಳೆಂದರೆ ಕೃಷ್ಣಕುಮಾರಿ, ಗರಿ, ನಾಕುತಂತಿ, ಸಖಿಗೀತ, ನಾದಲೀಲೆ, ಉಯ್ಯಾಲೆ, ಅರಳುಮರಳು,ನಾಕುತಂತಿ, ಬಾ ಹತ್ತರ, ಸರ್ಯಪಾನ, ಮರ್ತಿಮತ್ತು ಕಾಮಕಸ್ತೂರಿ, ಹೃದಯ ಸಮುದ್ರ, ಮುಕ್ತ ಕಂಠ, ಸಂಚಯ, ಉತ್ತರಾಯಣ ಮುಂತಾದ ಕವನ ಸಂಗ್ರಹಗಳು. ಬಾಲಬೋಧೆ, ಪರಾಕಿ, ಕಾವ್ಯ ವೈಖರಿ ಮುಂತಾದ 20ಕ್ಕೂ ಅಧಿಕ ಗದ್ಯ ಬರಹ ಸಂಗ್ರಹಗಳು. ಸಾಹಿತ್ಯವಿರ್ಶೆ, ಸಾಹಿತ್ಯ ಸಂಶೋಧನೆ, ವಿಚಾರ ಮಂಜರಿ, ಮುಂತಾದ ಹಲವು ಸಾಹಿತ್ಯ ಗ್ರಂಥಗಳನ್ನು ರಚಿಸಿದ್ದಾರೆ.
ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. 1918ರಲ್ಲಿ ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. “ಗರಿ”, “ಕಾಮಕಸ್ತೂರಿ”, “ಸರ್ಯಪಾನ”, “ನಾದಲೀಲೆ”, “ನಾಕುತಂತಿ” ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಬೇಂದ್ರೆಯವರು 1926ರಲ್ಲಿ ಸ್ವರ್ಮ ಪತ್ರಿಕೆಯ ಹಾಗೂ 1929ರಲ್ಲಿ ಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು. ಆಗಿನ್ನೂ ಸ್ವಾತಂತ್ಯ್ರ ಚಳುವಳಿ ಬಿಸಿ ಮುಟ್ಟಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿμï ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆಯವರು ಸ್ವಾತಂತ್ಯ್ರ ಚಳುವಳಿಯಲ್ಲಿ ಭಾಗವಹಿಸಿದ್ದರು. ಅದರಿಂದ ಸೆರೆಮನೆವಾಸ ಅನುಭವಿಸಿದರು.
ಕೆಲ ಕಾಲ ಮುಗದ ಎನ್ನುವ ಹಳ್ಳಿಯಲ್ಲಿ ದಿಗ್ಬಂಧನದಲ್ಲಿರಿಸಿತು. ಆರು ವರ್ಷಗಳ ವರೆಗೆ ಇವರಿಗೆ ಯಾರೂ ಯಾವುದೇ ನೌಕರಿಯನ್ನು ಕೊಡಕೂಡದೆಂದು ಸರಕಾರವು ಆಜ್ಞೆ ಹೊರಡಿಸಿತು. ಆರು ವರ್ಷಗಳವರೆಗೆ ಬೇಂದ್ರೆಯವರು ನಿರುದ್ಯೋಗಿಯಾಗಿ ಉಳಿಯಬೇಕಾಯಿತು.
ಬಳಿಕ 1938ರಲ್ಲಿ ಮಾಸ್ತಿಯವರು ಬೇಂದ್ರೆಯವರನ್ನು ಜೀವನ ಪತ್ರಿಕೆಯ ಸಂಪಾದಕರನ್ನಾಗಿ ಮಾಡಿದರು. ಇವರ ನಾಕುತಂತಿ ಕೃತಿಗೆ 1974 ಇಸ್ವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ.
1921ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ “ಗೆಳೆಯರ ಗುಂಪು” ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು. ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು.
ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾμÉಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು. ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾμÁಂತರ ಕನ್ನಡಕ್ಕೆ ಮಾಡಿಕೊಟ್ಟರು.
ಜಾನಪದ ಧಾಟಿಯ ಅವರ ಎμÉ್ಟೂೀ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧರ್ಯ ಅಪಾರ.
ಬೇಂದ್ರೆಯವರಿಗೆ ಕಾಶಿ ಹಿಂದೂ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್, ನಾಕುತಂತಿ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿಯ ಮೂಲಕ ಸಾಹಿತ್ಯ ಕ್ಷೇತ್ರದ ರ್ವೋಚ್ಛ ನೆಲೆಯಲ್ಲಿ ಗುರುತಿಸಿಕೊಂಡ ಬೇಂದ್ರೆಯವರು 1981ರ ಅಕ್ಟೋಬರ್ 26 ರಂದು ನರಕ ಚತರ್ದಶಿ ದಿನ ಗಾನಗಾರುಡಿಗ ಮುಂಬೈನ ಹರಿಕಿಶನ್ ಆಸ್ಪತ್ರೆಯಲ್ಲಿ ತಮ್ಮ ಜೀವನಯಾತ್ರೆಯನ್ನು ಮುಗಿಸಿದರು.
|| ಮತ್ತೊಮ್ಮೆ ಹುಟ್ಟಿಬರಲಿ ವರಕವಿ ದ.ರಾ.ಬೇಂದ್ರೆ ||

