ಬೆಂಗಳೂರು: ಇದೊಂದು ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.
ವಿಧಾನಸಭೆ ಕಲಾಪದಲ್ಲಿ ಬುಧವಾರ ಮಾಜಿ ಸಿಎಂ ಸಿದ್ಧರಾಮಯ್ಯ ಮಾತನಾಡಿದರು.
ರಾಜ್ಯ ಸರಕಾರ ಇನ್ನು ಟೇಕಾಫ್ ಆಗಿಲ್ಲ. ಸರ್ಕಾರ ರಸ್ತೆಯಲ್ಲಿ ಕೆಟ್ಟು ನಿಂತಿರುವ ಬಸ್ ನಂತಾಗಿದೆ. ಡಕೋಟಾ ಎಕ್ಸ್ ಪ್ರೆಸ್ ತರ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ನಾಲ್ಕೈದು ಕಡೆ ಬಸ್ ಹಿಡಿದು ಎಳೆದಾಡುತ್ತಿದ್ದಾರೆ. ಹೀಗಾಗಿ ಡಕೋಟಾ ಎಕ್ಸ್ ಪ್ರೆಸ್ ಹೇಗೆ ಮುಂದಕ್ಕೆ ಹೋಗುತ್ತದೆ ಎಂದು ಸಿದ್ದು ಪ್ರಶ್ನಿಸಿದರು.
ಇದೊಂದು ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ -ಸಿದ್ಧರಾಮಯ್ಯ

