ನಾನು ಸಿಎಂ ಆಗಲು ಪೈಪೆÇೀ ಟಿ ಮಾಡಿಲ್ಲ -ಡಿಕೆಶಿ

ಬೆಳಗಾವಿ: ನಾನು ಮುಖ್ಯಮಂತ್ರಿ ಆಗಲು ಪೈಪೆÇೀ ಟಿ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಡಿಕೆಶಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕೆ ಮಾತ್ರ ನನ್ನ ಪೈಪೆÇೀ ಟಿ, ಮುಖ್ಯಮಂತ್ರಿಯಾಗಲು ನಾನು ಪೈಪೆÇೀ ಟಿ ಮಾಡಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೆÇೀ ಟಿ ಇದೆ ಎಂಬುದು ಆಧಾರ ರಹಿತ ವದ್ಧಂತಿ ಎಂದು ಡಿಕೆಶಿ ತಿಳಿಸಿದರು.
ಜನ ಬಿಜೆಪಿ ಆಡಳಿತದಿಂದ ಬೇಸರಗೊಂಡಿದ್ದಾರೆ. ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಮತ್ತು ಮಸ್ಕಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು, ಕಾಂಗ್ರೆಸ್ ಪಕ್ಷ ಸತೀಶ್ ಜಾರಕಿಹೊಳಿ ಅವರನ್ನು ಬಲವಂತವಾಗಿ ಕಣಕ್ಕಿಳಿಸಿದೆ ಎಂದು ಹೇಳಿರುವುದಕ್ಕೆ ಡಿಕೆಶಿ ಪ್ರತಿಕ್ರಿಯಿಸಿ ನಾವು ನಮ್ಮ ಪಕ್ಷದಿಂದ ಯಾರನ್ನು ಬೇಕಾದರೂ ಅಭ್ಯರ್ಥಿ ಮಾಡುತ್ತೇವೆ. ಅದು ಅವರಿಗೆ ಸಂಬಂಧಪಡದ ವಿಷಯ ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡದ ನೀರು ಪೂರೈಕೆ ವ್ಯವಸ್ಥೆಯನ್ನು ಎಲ್ ಅಂಡ್ ಟಿ ಸಂಸ್ಥೆಗೆ ವಹಿಸಿರುವುದೇಕೆ ಎಂದು ಮೊದಲು ಪ್ರಹ್ಲಾದ್ ಜೋಷಿ ಉತ್ತರ ನೀಡಲಿ ಎಂದು ಡಿಕೆಶಿ ಹೇಳಿದರು.