1 ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆಗೆ ವಿದ್ಯುತ್ ಪೂರೈಕೆಗೆ ಸಚಿವ ಆನಂದ ಸಿಂಗ್ ಚಾಲನೆ

ವಿಜಯನಗರ: ಜಿಂದಾಲ್ ಎದುರುಗಡೆ ನಿರ್ಮಿಸಲಾಗಿರುವ 1 ಸಾವಿರ ಆಕ್ಸಿಜನ್ ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆಗೆ ನಿರಂತರ ವಿದ್ಯುತ್ ಪೂರೈಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ಸೋಮವಾರ ಚಾಲನೆ ನೀಡಿದರು.
1 ಸಾವಿರ ಆಕ್ಸಿಜನ್ ಬೆಡ್ ಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಪರಿವರ್ತಕಗಳ ಬಳಿಯ ಯಂತ್ರಗಳಿಗೆ ಸಚಿವ ಆನಂದ ಸಿಂಗ್ ಅವರು ಪೂಜೆ ಸಲ್ಲಿಸಿ ಬಟನ್ ಒತ್ತುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಮ್ಸ್ ನಿವೃತ್ತ ನಿರ್ದೇಶಕ ಡಾ. ದೇವಾನಂದ್, ತಾತ್ಕಾಲಿಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ಜಿಂದಾಲ್ ಸಿಬ್ಬಂದಿ ಇದ್ದರು.