ಹುಬ್ಬಳ್ಳಿ: ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಗೃಹ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬಿ.ಎಸ್.ವೈ ರಾಜೀನಾಮೆ ವಿಷಯ ಬಂದಾಗಿನಿಂದ ಕಳೆದ ಒಂದು ವಾರದಿಂದ ಸ್ವಾಮೀಜಿಗಳು ಭೇಟಿ ಆಗುವುದು, ಮಾತನಾಡುವುದು ಮಾಡುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ಇಂದು ಮಠಾಧೀಶರು ಸಭೆ ನಡೆಸುತ್ತಿದ್ದಾರೆಂದರು.
ಆದರೆ ಈಗಾಗಲೇ ಹೈಕಮಾಂಡ ಏನೂ ಹೇಳುತ್ತಾರೆ ಅದನ್ನು ಪಾಲನೆ ಮಾಡುವುದಾಗಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಏನೂ ಹೇಳಿಕೆ ನೀಡಿದ್ದಾರೋ ಅದು ಬಹಳ ಮಹತ್ವ ಎಂದು ಗೃಹ ಸಚಿವರು ತಿಳಿಸಿದರು.
ಪ್ರಲ್ಹಾದ್ ಜೋಶಿ ನಿವಾಸಕ್ಕೆ ರಾತ್ರಿ ಭೇಟಿ ನೀಡಿ ಚರ್ಚೆ ನಡೆಸಿದ ಕುರಿತು ಮಾಹಿತಿ ನೀಡಲು ನಿರಾಕರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಮ್ಮ ಸದ್ಯ ಆದ್ಯತೆ ಪ್ರವಾಹವಾಗಿದೆ. ಭಾರಿ ಮಳೆಯಿಂದಾಗಿ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ನಾನು ಪ್ರವಾಹ ಸ್ಥಳಗಳಿಗೆ ಭೇಟಿ ನೀಡತ್ತಾ ಇದ್ದೇವೆ ಎಂದು ಹೇಳಿದರು.

