ಬೆಂಗಳೂರು: ಇನ್ಮುಂದೆ ನಾನು ಸೂಪರ್ ಸಿಎಂ ಅಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಸಿಎಂ ಬದಲಾಗಿದ್ದರಿಂದ ನಾನು ಸೂಪರ್ ಸಿಎಂ ಟ್ಯಾಗ್ ನಿಂದ ಹೊರಗೆ ಬಂದಿರೋದಕ್ಕೆ ಸಂತೋಷವಾಗಿದ್ದೇನೆ ಎಂದು ವಿಜಯೇಂದ್ರ ಹೇಳಿದರು.
ಮುಂದೆ ಪಕ್ಷದಲ್ಲಿ ಅಥವಾ ಸರ್ಕಾರದೊಳಗೆ ಕೆಲಸ ಮಾಡಬೇಕು ಎಂಬುದನ್ನ ಹೈಕಮಾಂಡ್ ನಿರ್ಧರಿಸಲಿದೆ ಎಮದು ಅವರು ತಿಳಿಸಿದರು.
17 ಜನರು ಪಕ್ಷ ಮತ್ತು ಯಡಿಯೂರಪ್ಪನವರನ್ನು ನಂಬಿಕೊಂಡು ಬಂದವರು. ಎಲ್ಲರನ್ನು ಪಕ್ಷ ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುತ್ತೆ ಅನ್ನೋ ವಿಶ್ವಾಸವಿದೆ ಎಂದು ವಿಜಯೇಂದ್ರ ಹೇಳಿದರು.

