ಸಚಿವರು ಇದ್ದರೆ ಅವರೇನು ಗಡಿಗೆ ಬೀಗ ಹಾಕಲು ಸಾಧ್ಯವಿಲ್ಲ -ಸಿದ್ಧರಾಮಯ್ಯ

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿದ್ದರಾಮಯ್ಯ ಶನಿವಾರ ಮಾತನಾಡಿದರು.

ಬಿಜೆಪಿಯಲ್ಲೇ ಬೆಳೆದ ಯಡಿಯೂರಪ್ಪಗೆ ಅನುದಾನ ತರಲು ಸಾಧ್ಯವಾಗಲಿಲ್ಲ. ಇನ್ನು ಜನತಾದಳದಿಂದ ಹೋದ ಬಸವರಾಜ ಬೊಮ್ಮಾಯಿಗೆ ಆಗುತ್ತಾ.? ಜನತಾದಳದಿಂದ ಹೋದವರ ಮಾತು ಕೇಳುತ್ತಾರಾ.? ಎಂದರು.

ಸಚಿವ ಸಂಪುಟ ಆಗಬೇಕಿತ್ತು ನೆನ್ನೆ ಚರ್ಚೆ ಮಾಡಿಲ್ಲ. ಮುಂದಿನ ಬಾರಿ ಆಗಬಹುದು. ಕೊರೊನಾ ಹಿನ್ನೆಲೆಯಲ್ಲಿ ಆದಷ್ಟು ಬೇಗ ಪರಿಗಣಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಕೋವಿಡ್ 3ನೇ ಅಲೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಸರ್ಕಾರ ಕೊರೊನಾ 3ನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ರಾಜ್ಯ ಕೊರೊನಾ ಮೂರನೇ ಅಲೆಗೆ ಸಿಲುಕಲಿದೆ ಎಂದು ತಿಳಿಸಿದರು.

ಸಚಿವರು ಇಲ್ಲದಿದ್ದರೂ ಅಧಿಕಾರಿಗಳ ಮೂಲಕ ನಿರ್ವಹಣೆ ಮಾಡಬೇಕು. ಸಚಿವರು ಇದ್ದರೆ ಅವರೇನು ಗಡಿಗೆ ಬೀಗ ಹಾಕಲು ಸಾಧ್ಯವಿಲ್ಲ. ಅಧಿಕಾರಿಗಳ ಮೂಲಕ ಈ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಸರ್ಕಾರದ ಏಕ ವ್ಯಕ್ತಿಯಿಂದ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ಆಗಬೇಕು. ಕೇರಳ, ಮಹಾರಾಷ್ಟ್ರದಿಂದ ಬರುವವರನ್ನು ತಡೆಯಬೇಕು. ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ ಎಂದು ಅವರು ಹೇಳಿದರು.