ಶಾಲೆಯಲ್ಲಿ ಕಲಿತ ಹಾಗೆ ಮನೆಯಲ್ಲಿ ಕಲಿಯಲು ಸಾಧ್ಯವಿಲ್ಲ – ಮಾ.ವಿ.ರಾಂ ಪ್ರಸಾದ್

ಮೈಸೂರು: ಇಂದಿನಿಂದ ಶಾಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಯುವ ಬಳಗ ಹಾಗೂ ಅಪೂರ್ವ ಸ್ನೇಹ ಬಳಗ ವತಿಯಿಂದ ನಗರದ ವಿದ್ಯಾರಣ್ಯಪುರಂನಲ್ಲಿರುವ ಟಿ ಸುಬ್ಬಯ್ಯ ಶಾಲಾ ಮಕ್ಕಳಿಗೆ ಆರತಿ ಎತ್ತಿ ಗುಲಾಬಿ ಹೂ, ಪುಸ್ತಕ, ಪೆನ್ ಹಾಗೂ ಮಾಸ್ಕ್ ವಿತರಿಸಿ ವಿಶೇಷವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭ ಉಪಸ್ಥಿತರಿದ್ದ ನಗರಪಾಲಿಕೆಯ ಸದಸ್ಯರಾದ ಮಾ.ವಿ.ರಾಂ ಪ್ರಸಾದ್ ಮಾತನಾಡಿ, ಇವತ್ತು ನಮ್ಮ ರಾಜ್ಯದಲ್ಲಿ ಸಂತೋಷದ ದಿನ. ಕಾರಣವೇನೆಂದರೆ ವರ್ಷಗಳಿಂದಲೇ ಎಲ್ಲಾ ಶಾಲೆಗಳು ಬಾಗಿಲು ಹಾಕಿತ್ತು. ಮಕ್ಕಳು ಮನೆಯಲ್ಲಿಯೇ ವ್ಯಾಸಂಗ ಮಾಡುವ ಸ್ಥಿತಿ ಬಂದಿತ್ತು. ಆದರೆ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತ ಹಾಗೆ ಮನೆಯಲ್ಲಿ ಕಲಿಯಲು ಸಾಧ್ಯವಿಲ್ಲ. ಏನೇ ಆದರೂ ಶಾಲೆ ಶಾಲೆನೇ. ಆ ವಿದ್ಯಾಲಯದಲ್ಲಿ ಆ ಶಿಕ್ಷಕರಿಂದ ಶಿಕ್ಷಣವನ್ನು ಪಡೆಯುವಂಥದ್ದು ಆನ್ ಲೈನ್ ನಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಆದ ಕಾರಣ ರಾಜ್ಯ ಸರ್ಕಾರ 9ರಿಂದ ಮೇಲ್ಪಟ್ಟ ಎಲ್ಲ ತರಗತಿಗಳು ಪ್ರಾರಂಭವಾಗಬೇಕೆನ್ನುವ ನಿಟ್ಟಿನಲ್ಲಿ ಇಂದು ಶಾಲೆ ಆರಂಭವಾಗಿರುವುದು ಬಹಳ ಸಂತೋಷ ತಂದಿದೆ. ಆದರೆ ಅಷ್ಟೇ ಜಾಗರೂಕತೆಯಿಂದ ನಾವೆಲ್ಲ ಇರಬೇಕಿದೆ ಎಂದರು.

ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಮಾಸ್ಕ್ ಹಾಕಿ, ಸ್ಯಾನಿಟೈಸರ್ ನ್ನು ಜೊತೆಯಲ್ಲಿಯೇ ಕಳುಹಿಸಬೇಕು. ಅವರಲ್ಲಿ ಜಾಗೃತಿ ಮೂಡಿಸಬೇಕು. ಊಟಮಾಡುವ ಮುನ್ನ ಕೈತೊಳೆಯಬೇಕು. ನಡುವೆ ಅಂತರವನ್ನು ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇದನ್ನೆಲ್ಲ ಮಕ್ಕಳಿಗೆ ತಿಳಿಹೇಳುವ ಕೆಲಸವನ್ನು ಶಿಕ್ಷಕರು, ಪೆÇೀಷಕರು ಮಾಡಬೇಕು. ಇದು ಅವರ ಜವಾಬ್ದಾರಿ ಎಂದು ತಿಳಿಸಿದರು.

ನಾವಿವತ್ತು ಕೆ.ಆರ್. ಯುವಕ ಬಳಗದಿಂದ ಮಕ್ಕಳಿಗೆ ಸ್ವಾಗತ ಕೋರಿ ಅವರಿಗೆ ಪುಸ್ತಕ ಪೆನ್ನನ್ನು ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಪೆÇೀಷಕರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸಬಾರದು. ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ವ್ಯಾಕ್ಸಿನೇಶನ್ ಆಗಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಆಗಿದೆ. ಶಾಲೆ ಆರಂಭವಾಗಿರುವ 9 ಮತ್ತು 10ನೇ ತರಗತಿಯ ಮಕ್ಕಳಿಗೆ ವ್ಯಾಕ್ಸಿನೇಶನ್ ಆಗಿಲ್ಲ. ಈ ದೃಷ್ಟಿಯಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಪ್ರಧಾನಿ ನರೇಂದ್ರ ಮೋದಿಯವರು ಮತ್ತು ರಾಜ್ಯ ಸರ್ಕಾರ ಆದಷ್ಟು ಬೇಗ ಈ ಮಕ್ಕಳಿಗೂ ವ್ಯಾಕ್ಸಿನೇಶನ್ ಆಗುವ ಹಾಗೆ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರ ಪಾಲಿಕಾ ಮಾಜಿ ಸದಸ್ಯರಾದ ಸುನೀಲ್ ಕುಮಾರ್, ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ, ಸುಚೀಂದ್ರ, ಹೆಡ್ ಮಾಸ್ಟರ್ ನಟರಾಜ್, ಮಹದೇವಗೌಡ, ರಮೇಶ್, ವಿರೂಪಾಕ್ಷ, ಮೀನಾಕ್ಷಿ, ಆರತಿ, ಗೋಪಾಲಕೃಷ್ಣ ಇನ್ನಿತರರು ಹಾಜರಿದ್ದರು.