ಮೈಸೂರು: ಬ್ರಹ್ಮ ಶ್ರೀ ನಾರಯಣ ಗುರು ಜೀರವರ 167 ಜನ್ಮ ಜಯಂತಿಯನ್ನು ನಗರದ ಬಂಬೂ ಬಜಾರ್ ರಸ್ತೆಯಲ್ಲಿರುವ ನಾರಯಣ ಗುರು ರಸ್ತೆಯಲ್ಲಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ಆಚರಿಸಿತು.
ನಾರಯಣ ಗುರು ರಸ್ತೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು.
ಪುಷ್ಪಾರ್ಚನೆ ಮಾಡಿ ಮಾತನಾಡಿದ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರರವರು, ನಾರಯಣ ಗುರುರವರು ಒಬ್ಬ ಸಂತರು ಸರಸ್ವತಿ ನಾಡು ಎನ್ನುವ ಕೇರಳದಲ್ಲಿ ಮೇಲ್ವರ್ಗ ಕೆಳವರ್ಗ ಎಂಬ ಕೆಟ್ಟ ಪಿಡುಗನ್ನು ಹೋಗಲಾಡಿಸಿ ಮಾನವನ ಜನ್ಮ ಒಂದೇ ಎಂಬ ಸಂದೇಶವನ್ನು ಸಾರಿದ ಸಂತ ಎಂದು ತಿಳಿಸಿದರು.
ಹಿಂದುಳಿದ ವರ್ಗದವರನ್ನು ಶೈಕ್ಷಣಿಕವಾಗಿ ಎಲ್ಲ ವರ್ಗದವರೊಂದಿಗೆ ಸಮಾನತೆಯನ್ನು ತಂದವರು, ಹಿಂದು ಧರ್ಮದ ಸುಧಾರಕ, ಕೇರಳ ರಾಜ್ಯದ ಬಸವಣ್ಣ, ಹಿಂದು ಧರ್ಮದವರು ಅನ್ಯ ಧರ್ಮಕ್ಕೆ ಮತಾಂತರ ಆಗುವುದನ್ನು ತಡೆದ ಮಹಾನ್ ಸಂತ ಇಂಥ ಮಹಾನ್ ಪುರುಷರ ಹೆಸರಿನಲ್ಲಿ ಈ ರಸ್ತೆಗೆ ಮಹಾನಗರ ಪಾಲಿಕೆ ನಾರಯಣ ಗುರು ಎಂದು ನಾಮಕರಣ ಮಾಡಿರುವುದು ಸಂತೋಷ ಹಾಗೇಯೆ ನಗರ ವ್ಯಾಪ್ತಿಯಲ್ಲಿ ಯಾವುದಾದರೂ ಸ್ಥಳದಲ್ಲಿ ಇವರ ಪುತ್ಥಳಿ ನಿರ್ಮಾಣ ಮಾಡಲು ಚಿಂತಿಸಲಾಗುವುದು ಎಂದರು.
ನಂತರ ಮಾತನಾಡಿದ ನಗರ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ಜೋಗಿಮಂಜು, ಮಲಯಾಳಂನ ಭಾಷೆಯಲ್ಲಿ ಬರೆದಿರುವ ಅರಿವಂ ಪುಸ್ತಕ ಈ ಜಗತ್ತಿನಲ್ಲಿ ಸಮಾನತೆಯನ್ನು ಸಾರುತ್ತದೆ ಅವರ ಹೋರಾಟ ಕೇವಲ ಜಾತಿಯ ಕೌರ್ಯದ ವಿರುದ್ದವಲ್ಲ ಧಾರ್ಮಿಕತೆಯ ಮೂಲಕ ಮಹಿಳೆಯರ ಪರವಾಗಿ ಧ್ವನಿ ಮಾಡಿದರು ಎಂದು ತಿಳಿಸಿದರು.
ನಗರಪಾಲಿಕೆ ಸದಸ್ಯ ರವೀಂದ್ರ, ಮಾಜಿ ನಗರ ಪಾಲಿಕೆ ಸದಸ್ಯ ಜಯರಾಮ್, ವಾಣೀಶ್, ಮೈ.ಪು.ರಾಜೇಶ್, ಪ್ರದಾನ ಕಾರ್ಯದರ್ಶಿ ಗೋಪಾಲ್, ಸೋಶಿಯಲ್ ಮೀಡಿಯಾ ಅಭಿಲಾಶ್ ಕೊಟಾಯ್, ಶಿವರಾಜ್, ಸೂರಜ್, ಜಗದೀಶ್, ಪ್ರಸಾದ್ ಜೇಂಕಾರ್, ಪುರುಷೋತ್ತಮ್, ಶೋಬಾ, ವಿಜಯ್, ಶಶಿ, ಷಣ್ಮುಗಂ ಮುಂತಾದವರು ಈ ಸಂಧರ್ಭದಲ್ಲಿದ್ದರು.

