ಕೋವಿಡ್ ಸಮಯ ಅರಿಸಿನ ಗಣಪ ಉತ್ತಮ -ಎಚ್ ವಿ ರಾಜೀವ್

ಮೈಸೂರು: ಪರಿಸರ ಸ್ನೇಹಿ ಬಳಗದ ವತಿಯಿಂದ ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ಏರ್ಪಡಿಸಿದ್ದ ಪರಿಸರ ಸ್ನೇಹಿ ಅರಿಸಿನ ಗಣೇಶ ಅಭಿಯಾನದಲ್ಲಿ ಮುಡಾ ಅಧ್ಯಕ್ಷ ಎಚ್ ವಿ ರಾಜೀವ್ ಭಿತ್ತಿಪತ್ರ ಬಿಡುಗಡೆಗೊಳಿಸಿದರು.

ಭಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿ, ಕೋವಿಡ್ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಹಬ್ಬದ ಸಂದರ್ಭ ಅರಿಸಿನ ಗಣೇಶ ಮೂರ್ತಿ ತಯಾರಿಸಲು ಇಂತಹ ಜಾಗೃತಿ ಆಂದೋಲನ ಸಹಕಾರಿಯಾಗಿದೆ. ಕೋವಿಡ್ ಮಾರ್ಗಸೂಚಿಯನ್ವಯ ಈ ಬಾರಿ ಗಣೇಶ ಮೂರ್ತಿಯನ್ನು ಮನೆಯಲ್ಲೇ ಪೂಜಿಸಿ ನಂತರ ಮನೆಯಲ್ಲೇ ವಿಸರ್ಜಿಸುವ ಕುರಿತು ಜನಜಾಗೃತಿ ಮೂಡಿಸುತ್ತಿರುವುದು ಉತ್ತಮವಾದ ಕಾರ್ಯ ಎಂದರು.

ಪರಿಸರಸ್ನೇಹಿ ತಂಡದವರು ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳು ಮತ್ತು ನಾಗರಿಕರಲ್ಲಿ ಅರಿಸಿನ ಗಣೇಶ ಮೂರ್ತಿಗಳನ್ನು ತಯಾರಿಸುವ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ಪ್ರತಿಯೊಬ್ಬರೂ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಎಚ್ ವಿ ರಾಜೀವ್ ಕರೆ ನೀಡಿದರು.

ಪರಿಸರ ಜಾಗೃತಿ ಉಳ್ಳ ಕರಪತ್ರವನ್ನು ಮೈಸೂರು ನಗರ ಹಾಗೂ ಜಿಲ್ಲಾ ಸುತ್ತಮುತ್ತ ಸಾರ್ವಜನಿಕ ಸ್ಥಳದಲ್ಲಿ ಅಂಟಿಸಿ ಜಾಗೃತಿ ಮೂಡಿಸಲಾಗುವುದು ಹಾಗೆಯೇ ಸಾಮಾಜಿಕ ಜಾಲತಾಣ ಸೇರಿದಂತೆ ಇನ್ನಿತರ ಕಡೆ ಪ್ರಚಾರವನ್ನು ಮಾಡಿ ಈ ಬಾರಿ ಪರಿಸರ ಸ್ನೇಹಿ ಗಣೇಶ ಅಭಿಯಾನವನ್ನು ಮಾಡಲಾಗುವುದು.

ನಗರ ಪಾಲಿಕಾ ಸದಸ್ಯರಾದ ಶಿವಕುಮಾರ್, ಬಿ ವಿ ಮಂಜುನಾಥ್, ಸತ್ಯರಾಜ್, ಮಾಜಿ ನಗರ ಪಾಲಿಕಾ ಸದಸ್ಯ ಜಗದೀಶ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್ ಜಿ ಗಿರಿಧರ್, ಲಕ್ಷ್ಮಿದೇವಿ,
ಜೀವಧಾರ ಗಿರೀಶ್, ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್, ಮುನಿರತ್ನ, ರಂಗನಾಥ್ ಹಾಗೂ ಇನ್ನಿತರರು ಇದೇ ಸಂದರ್ಭದಲ್ಲಿ ಹಾಜರಿದ್ದರು.