ಮೈಸೂರು: ಕರ್ನಾಟಕದ ಪೆÇಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಜೊತೆಗೆ ಯಾವುದೇ ಸಂದರ್ಭ ಬಂದರೂ ಶೀಘ್ರವಾಗಿ ಅಪರಾಧಿಗಳ ಸುಳಿವನ್ನು ಜಾಡುಹಿಡಿದು ಹೆಡೆಮುರಿ ಕಟ್ಟುವವರು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಬುಧವಾರ ಕೆ.ಆರ್.ನಗರದಲ್ಲಿ ಪೆÇಲೀಸ್ ವಸತಿ ಗೃಹ-2020 ಫೆಸ್ 3 ಯೋಜನೆಯಡಿ ನೂತನವಾಗಿ ನಿರ್ಮಿಸಿದ್ದ 24 ಪೆÇಲೀಸ್ ವಸತಿ ಗೃಹಗಳನ್ನು ಉದ್ಘಾಟಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಭಾರತದಲ್ಲೇ ಕರ್ನಾಟಕದ ಪೆÇಲೀಸರ ಕಾರ್ಯವೈಖರಿ ಹೆಸರುವಾಸಿಯಾಗಿದೆ. ಇವರು ಕಾರ್ಯನಿರ್ವಹಿಸುತ್ತಿರುವುದರಿಂದಲೆ ಜನರು ನಮ್ಮದಿಯಿಂದ ಓಡಾಡುವಂತಾಗಿದೆ. ಪ್ರಾಮಾಣಿಕವಾಗಿ ಕಾರ್ಯನಿರ್ಹಹಿಸುವ ಪೆÇಲೀಸರಿಗೆ ಮನೆಯ ಸೌಲಭ್ಯ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.
ಮಳೆ, ಗಾಳಿ ಯಾವುದನ್ನು ಪರಿಗಣಿಸದೆ 24 ಗಂಟೆಯೂ ಸೇವೆ ಸಲ್ಲಿಸುವವರು ಪೆÇಲೀಸರು ಯಾವುದೇ ತೊಂದರೆ ಬಂದರೂ ಮೊದಲು ಬರುವವರೆ ಪೆÇಲೀಸರು. ಪ್ರಾಮಾಣಿಕವಾಗಿ ಸ್ಪಂದಿಸುವ ಮೂಲಕ ಸಾರ್ವಜನಿಕರ ಸೇವೆಗೆ ಮುಂದಾಗುತ್ತಾರೆ. ಹೀಗಾಗಿ ಸರ್ಕಾರ ಎಲ್ಲ ಕಡೆ ಪೆÇಲೀಸರಿಗೆ ಮನೆಗಳನ್ನು ನಿರ್ಮಿಸಿಕೊಡಲು ಚಾಲನೆ ನೀಡಿದೆ ಎಂದು ಹೇಳಿದರು.
ಅತ್ಯಾಚಾರ ಪ್ರಕರಣದಲ್ಲಿಯೂ ಸಹ ಮೈಸೂರಿನ ಪೆÇಲೀಸರು ದೀರ್ಘ ಸಮಯವನ್ನು ತೆಗೆದುಕೊಂಡಿಲ್ಲ. ಚುರುಕು ಕಾರ್ಯಾಚರಣೆ ಮೂಲಕ ಒಂದು ವಾರದೊಳಗಾಗಿ ಆರೋಪಿಗಳ ಸುಳಿವನ್ನು ಪತ್ತೆ ಹಚ್ಚಿ ತಮಿಳುನಾಡಿಗೆ ಹೋಗಿ ಬಂಧಿಸಿದ್ದಾರೆ. ಯಾವುದೇ ಅಪರಾಧಿಗಳನ್ನು ರಕ್ಷಿಸುವ ಕೆಲಸವಾಗುತ್ತಿಲ್ಲ. ಇದರ ಬಗ್ಗೆ ಮಾತನಾಡುವವರು ಪರಿಜ್ಞಾನ ಇಟ್ಟುಕೊಳ್ಳಬೇಕು. ಆರೋಪ ಮಾಡಬೇಕು ಎಂಬ ಕಾರಣಕ್ಕೆ ಮಾಡಬಾರದು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಸಾ.ರಾ.ಮಹೇಶ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಪುರಸಭೆ ಅಧ್ಯಕ್ಷ ಸುಬ್ರಹ್ಮಣ್ಯ, ಕೆ.ಎಲ್.ಜಗದೀಶ್ ಸೇರಿದಂತೆ ಇತರರು ಹಾಜರಿದ್ದರು.

