ಮೈಸೂರ ಅಂದಗೆಡಿಸಿದ ಶಾಸಕರ ಹುಟ್ಟು ಹಬ್ಬದ ಶುಭಾಶಯ ಫ್ಲೆಕ್ಸ್; ಕ್ರಮ ಕೈಗೊಳ್ಳದ ಪಾಲಿಕೆ

ಮೈಸೂರು: ಭಾರತೀಯ ಜನತಾ ಪಕ್ಷದವರು ಸ್ವಚ್ಛ ಭಾರತ್ ಎನ್ನುತ್ತಿದ್ದರೆ ಅದಕ್ಕೆ ಬಿಜೆಪಿಯ ಪಕ್ಷದ ಶಾಸಕರೊಬ್ಬರು ತದ್ವಿರುದ್ಧವಾಗಿ ಇದ್ದಾರೆ.

ಅವರು ಮತ್ತಯಾರು ಅಲ್ಲ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ.

ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತದ ಅಭಿಯಾನವನ್ನು ಜಾರಿಗೊಳಿಸಿ, ನಗರವನ್ನು ಸುಂದರ ಹಾಗೂ ಸ್ವಚ್ಛವಾಗಿರಿಸಿಕೊಳ್ಳುವಂತೆ ತಿಳಿಸಿದ್ದಾರೆ. ಅದರಂತೆ ಸಾರ್ವಜನಿಕರೂ ಸೇರಿದಂತೆ ಅನೇಕರು ಅನುಸರಿಸಿ ಸ್ವಚ್ಛಭಾರತ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ.

ಆದರೆ ಬಿಜೆಪಿಯ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಶನಿವಾರ (ಸೆ. 11) ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಅವರ ಕ್ಷೇತ್ರದಾದ್ಯಂತ ಅವರ ಭಾವಚಿತ್ರವಿರುವ ಜಾಹೀರಾತು ಫಲಗಳನ್ನು ಹಾಕಿ ಶುಭ ಕೋರಿದ್ದಾರೆ.

ನಾಗೇಂದ್ರರ ಪರ ಹಾಕಲಾಗಿರುವ ಶುಭಾಶಯ ಫಲಕವನ್ನು ಕಂಡ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಾಸಕ ಎಲ್.ನಾಗೇಂದ್ರ ಅವರು ಜನ್ಮದಿಕ್ಕಾಗಿ ಗುರುವಾರದಿಂದಲೇ ಚಾಮರಾಜ ಕ್ಷೇತ್ರಾದ್ಯಂತ ಪಡುವಾರಹಳ್ಳಿ, ವಿಶ್ವವಿದ್ಯಾನಿಲಯ ರಸ್ತೆಗಳಲ್ಲಿ ಇರುವ ಪ್ರತಿಯೊಂದು ವಿದ್ಯುತ್ ಕಂಬಗಳಿಗೆ ನಾಗೇಂದ್ರರ ಭಾವಚಿತ್ರವಿರುವ ಶುಭಾಶಯ ಫಲಕಗಳನ್ನು ಹಾಕಿ ಮೈಸೂರಿನ ಅಂದವನ್ನು ಹಾಳುಗೆಡವಿದ್ದಾರೆ.

ಮೈಸೂರು ನಗರ ವ್ಯಾಪ್ತಿಯಲ್ಲಿ ಈಗಾಗಲೇ ಫ್ಲೆಕ್ಸ್, ಬಂಟಿಂಗ್ಸ್, ಹೋರ್ಡಿಂಗ್ಸ್ ಗಳನ್ನು ಅಳವಡಿಸಬಾರದೆಂಬ ನಿಯಮವಿದೆ. ಅದನ್ನು ಮೀರಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಂಡು ದಂಡ ವಿಧಿಸಲಾಗುತ್ತದೆ.

ಇವೆಲ್ಲ ತಿಳಿದಿದ್ದರೂ ಕಳೆದೆರಡು ದಿನಗಳಿಂದಲೇ ಶಾಸಕರಿಗೆ ಶುಭಾಶಯ ಕೋರಿ ಫಲಕಗಳನ್ನು ರಸೆಯುದ್ದಕ್ಕೂ ಹಾಕಲಾಗಿದೆ.
ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಇದರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಇದು,್ದ ಇದನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮೈಸೂರಿನಲ್ಲಿ ಸಾರ್ವಜನಿಕರು ಫಲಕ ಹಾಕಿದರೆ ಅದನ್ನು ತೆಗೆದು ಹಾಕಿ, ಹಾಕಿದವರ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸುವ ಪಾಲಿಕೆ ಅಧಿಕಾರಿಗಳು ಈಗ ಏಕೆ ಯಾವುದೇ ಕ್ರಮವನ್ನು ಶಾಸಕರ ಪರವಾಗಲಿ ಅಥವಾ ಶುಭಾಶಯ ಕೋರಿ ಫಲಕ ಹಾಕಿದವರ ವಿರುದ್ಧವಾಗಲಿ ಏನೂ ಕ್ರಮ ಕೈಗೊಂಡಿಲ್ಲ, ದಂಡವನ್ನೂ ವಿಧಿಸಿಲ್ಲ, ಫಲಕಗಳನ್ನು ಕಿತ್ತು ಹಾಕಿಲ್ಲ ಏಕೆ ಎಂದು ಮೈಸೂರಿಗರು ಪ್ರಶ್ನಿಸುತ್ತಿದ್ದಾರೆ.