ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ದತ್ತಾತ್ರೇಯ ದೇವಸ್ಥಾನ ಹಾಗೂ ಬಾಲ ಸುಬ್ರಹ್ಮಣ್ಯ ದೇವಸ್ಥಾನ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಒಡೆದುಹಾಕುವ ಆದೇಶದ ವಿರುದ್ಧ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಜೋಡಿ ರಸ್ತೆಯ ದತ್ತಾತ್ರೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ ಪ್ರಕಾಶ್ ಅವರು ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿ, ಹಿಂದೂ ಧಾರ್ಮಿಕ ಶ್ರದ್ಧಾ
ಹಿಂದೂ ದೇವಾಲಯಗಳನ್ನು ಒಡೆದು ಹಾಕುವಾದ ಸ್ಥಳೀಯ ಭಕ್ತಾದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರಾತ್ರೋರಾತ್ರಿ ನೆಲಸಮ ಮಾಡುವುದು ಅಕ್ಷಮ್ಯ ಮತ್ತು ನಂಜನಗೂಡಿನ ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಾಲಯವನ್ನು ಪುನರ್ನಿರ್ಮಾಣ ಮಾಡಿ ಭಕ್ತಾಧಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸಮಯದಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ತಾತ್ಕಾಲಿಕ ತಡೆಯಾಜ್ಞೆಯನ್ನು ಸ್ವಾಗತಿಸಿ ಪ್ರತಿಭಟನೆಯನ್ನು ಕೈಬಿಡಲಾಯಿತು.
ಇದು ತಾತ್ಕಾಲಿಕವಾಗಿದ್ದು ಇದೇ ರೀತಿಯ ಧೋರಣೆ ಮುಂದುವರೆದರೆ ಹಿಂದೂ ಸಂಘಟನೆಗಳೊಡನೆ ಸೇರಿ ರೂಪುರೇಷ ಸಿದ್ಧಪಡಿಸಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕ ಎಂ ಆರ್ ಬಾಲಕೃಷ್ಣ, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ರಾಕೇಶ್ ಭಟ್, ಕಡಕೊಳ ಜಗದೀಶ್, ಜಯಸಿಂಹ, ವಿನಯ್ ಕಣಗಾಲ್, ರಂಗನಾಥ್, ಸುಚೀಂದ್ರ, ಕಲ್ಕೆರೆ ನಾಗರಾಜ್, ಹರೀಶ್, ರಾಜ್ ಕುಮಾರ್, ವಿಘ್ನೇಶ್ವರ ಭಟ್ಟ, ಶ್ರೀನಿವಾಸ್, ಜ್ಯೋತಿ, ಲತಾ ಬಾಲಕೃಷ್ಣ, ಲತಾ ಮೋಹನ್, ವಿಕಾಶ್ ಶಾಸ್ತ್ರಿ, ಪ್ರಶಾಂತ್, ಶಿವಕುಮಾರ್ ಶರ್ಮಾ, ನವೀನ್, ರಾಕೇಶ್ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

