“ಸೇವ್ ಥಿಯೇಟರ್” ಅಭಿಯಾನ

ಮೈಸೂರು: ಮೈಸೂರು ನಗರದಲ್ಲಿ ಸ್ವಲ್ಪ ದಿನಗಳ ಮುಂಚೆಯಯಷ್ಟೆ ಶಾಂತಲ, ಲಕ್ಷ್ಮೀ ಹಾಗು ನಿನ್ನೆ ಸರಸ್ವತಿ ಚಿತ್ರಮಂದಿರಗಳು ಮುಚ್ಚಲಾಯಿತು ಈ ಹಿನ್ನೆಲೆಯಲ್ಲಿ “ಸೇವ್ ಥಿಯೇಟರ್” ಅಭಿಯಾನವನ್ನು ಬುಧವಾರ ವಿ.ಕೆ.ಎಸ್ ಫೌಂಡೆಶನ್ ವತಿಯಿಂದ ನಗರದ ಸರಸ್ವತಿಪುರಂನಲ್ಲಿನ ಸರಸ್ವತಿ ಚಿತ್ರಮಂದಿರದ ಮುಂಭಾಗ ನಡೆಸÀಲಾಯಿತು.

ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಮಾತನಾಡಿ, ಕೋವಿಡ್ ಬಂದ ದಿನದಿಂದ ಸಿನಿಮಾ ಥಿಯೇಟರ್ ಗಳು ಒಂದರ ಮೇಲೊಂದು ಮುಚ್ಚುತ್ತಾ ಬಂದಿರುವುದು ಬಹಳ ಬೇಸರದ ಸಂಗತಿ ಎಂದರು.

ಒಂದರ ನಂತರ ಒಂದು ಚಿತ್ರಮಂದಿರ ಮುಚ್ಚುತ್ತಿರುವುದು ನೋಡಿದರೆ ಸಿನಿಪ್ರಿಯರ ಮನಸ್ಸಿಗೆ ತೀವ್ರ ನೋವುಂಟಾಗಿರುವುದಷ್ಟೆ ಸತ್ಯ. ಮುಂದಿನ ದಿನಗಳಲ್ಲಾದರು ಈ ಸಿನಿಮಾ ರಂಗಕ್ಕೆ ಸರ್ಕಾರ ಏನಾದರು ತೆರಿಗೆ ವಿನಾಯಿತಿ ಅಥವಾ ಇತರ ಸರ್ಕಾರಿ ಸವಲತ್ತುಗಳನಾದರು ನೀಡಿ ಚಿತ್ರಮಂದಿರಗಳನ್ನು ರಕ್ಷಿಸಬೇಕೆಂದು ಮನವಿ ಅವರು ಮಾಡಿದರು.

ಇಂತಹ ಚಿತ್ರಮಂದಿರಗಳೆ ಮೈಸೂರಿಗೆ ಹೆಮ್ಮೆಯ ಸಂಗತಿಯಾಗಿತ್ತು. ಇಂತಹ ಹಳೆಯ ಚಿತ್ರಮಂದಿರಗಳು ಮುಚ್ಚಿದರೆ ಮುಂದಿನ ಪೀಳಿಗೆಗೆ ನಾವು ಕೇವಲ ಭಾವಚಿತ್ರ ತೋರಿಸಿ ಚಿತ್ರಮಂದಿರ ಹೀಗಿತ್ತು ಎಂದು ತೊರಿಸುವ ಪರಿಸ್ಥಿತಿ ಎದುರಾಗುತ್ತದೆಂದರು.

ಹೀಗೆ ಮುಚ್ಚಿದ ಚಿತ್ರಮಂದಿರಗಳನ್ನೆ ನಂಬಿ ಜೀವನ ನಡೆಸುತ್ತಿದ್ದ ಕಾರ್ಮಿಕ ವರ್ಗದ ಕಥೆಯನ್ನು ನೆನೆದರೆ ಮನಸ್ಸಿಗೆ ನೋವುಂಟು ಆಗುತ್ತದೆ ಎಂದರು.

ಅಭಿಯಾನ ಸಂಧರ್ಭದಲ್ಲಿ ರಾಷ್ಟ್ರೀಯ ಹಿಂದೂ ಸಮಿತಿ ಪದಾಧಿಕಾರಿಗಳಾದ ತೇಜಸ್, ಗಗನ್, ವಿನಯ್, ವರುಣ್, ಚಂದನ್, ಪ್ರಜ್ವಲ್, ಮನೋಜ್, ಪ್ರದೀಪ್ ಹಾಗು ಚಿತ್ರಮಂದಿರದ ಕಾರ್ಮಿಕರು, ಸಾರ್ವಜನಿಕರು ಉಪಸ್ಥಿತರಿದ್ದರು.