ಮೈಸೂರು: ಮಾಜಿ ಕೇಂದ್ರ ಸಚಿವ ದಿ. ಅನಂತಕುಮಾರ್ ರವರ ಜನ್ಮದಿನಾಚರಣೆ ಅಂಗವಾಗಿ ಪ್ರಜ್ಞಾವಂತ ನಾಗರಿಕ ವೇದಿಕೆ ಹಾಗೂ ಅನಂತ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ನಗರದ ಕನಕಗಿರಿಯಲ್ಲಿರುವ ಶ್ರೀ ಭಾರತಿ ವೃದ್ಧ ಸೇವಾಶ್ರಮ ದಲ್ಲಿರುವ ವೃದ್ಧರಿಗೆ ಹೊದಿಕೆ ಹಾಗೂ ಹಣ್ಣು ಹಂಪಲು ಬುಧವಾರ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ.ಆರ್ ಸತ್ಯನಾರಾಯಣ್ ರವರು ಮಾತನಾಡಿ, ಅನಂತಕುಮಾರ್ ಅವರು ಅದಮ್ಯ ಚೇತನದ ಮೂಲಕ ಅಕ್ಷರ ಅನ್ನ ಆರೋಗ್ಯದ ಕ್ಷೇತ್ರದಲ್ಲಿ ಲಕ್ಷಾಂತರ ಮಂದಿಯ ಜೀವನಕ್ಕೆ ದಾರಿದೀಪವಾಗಿದ್ದಾರೆಂದು ತಿಳಿಸಿದರು.
ಬೆಂಗಳೂರನಲ್ಲಿ ಸಾಕಷ್ಟು ಸಂಘ ಸಂಸ್ಥೆಗಳಿಗೆ ಹಸಿರು ಸಂರಕ್ಷಣೆ ಮಾಡಲು ಪೆÇ್ರೀತ್ಸಾಹ ನೀಡಿದರು. ಕನ್ನಡ ಭಾಷೆ ಗಡಿನಾಡು ಜಲವಿವಾದ ಬಂದಾಗ ಪಕ್ಷಾತೀತವಾಗಿ ಕನ್ನಡಿಗನಾಗಿ ಧ್ವನಿಯೆತ್ತುತ್ತಿದ್ದರು ಎಂದರು.
ರೈತಾಪಿವರ್ಗಕ್ಕೆ ರಾಸಾಯನಿಕ ಬಣ್ಣ ಮಿಶ್ರಣ ರಹಿತ ರಸಗೊಬ್ಬರ ಕಡಿಮೆ ಬೆಲೆಯಲ್ಲಿ ವಿತರಣೆ, ಬಡವರ್ಗದ ಹೃದಯಸಂಬಂಧಿ ಶಸ್ತ್ರಚಿಕಿತ್ಸೆ ಸ್ಟಂಟ್ ಅಳವಡಿಕೆಗೆ ಸರ್ಕಾರದಿಂದ ಸಬ್ಸಿಡಿ, ವಿವಿಧ ಕ್ಷೇತ್ರದ ನೂರಾರು ವ್ಯಕ್ತಿಗಳನ್ನ ಸಮಾಜದ ಶಕ್ತಿಯನ್ನಾಗಿ ಮುಖ್ಯವಾಹಿನಿಗೆ ತಂದವರು ಅನಂತ್ ಕುಮಾರ್ ರವರು ಎಂದವರು ತಿಳಿಸಿದರು.
ವಿಪ್ರ ಮಹಿಳಾ ಮುಖಂಡರಾದ ವೀಣಾ ಅಯ್ಯಂಗಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್, ರಂಗನಾಥ್, ಜಯಸಿಂಹ, ಸುಚೀಂದ್ರ, ಕುಸುಮಾ, ಲಕ್ಷ್ಮಿ,ಶೈಲಾ, ಸವಿತಾ, ಜಯಲಕ್ಷಿ ಮಾಲ್, ಶ್ಯಾಮ್ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

