ಕ್ರಾಂತಿಕಾರಿ ಭಗತ್ ಸಿಂಗ್ 114ನೇ ಜನ್ಮ ದಿನಾಚರಣೆ

ಮೈಸೂರು: ಯುವ ಭಾರತ್ ಸಂಘಟನೆ ವತಿಯಿಂದ ತ್ರಿವೇಣಿ ವೃತ್ತದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ರವರ 114ನೇ ಜನ್ಮ ದಿನಾಚರಣೆ ಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಾರ್ವಜನಿಕ ರಿಗೆ ಸಿಹಿ ವಿತರಿಸುವ ಮೂಲಕ ಸೋಮವಾರ ಆಚರಿಸಲಾಯಿತು

ನಂತರ ಭಾ.ಜ.ಪ.ನಗರ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ಜೋಗಿಮಂಜು ಮಾತನಾಡಿ, ಇಂದಿನ ಯುವ ಪೀಳಿಗೆಯ ಕ್ರಾಂತಿ ಕಿಡಿಯಾದ ಭಗತ್ ಸಿಂಗ್ ರವರ ಮಾರ್ಗದರ್ಶನದಂತೆ ನಡೆಯಬೇಕು ಎಂದು ಕರೆ ನೀಡಿದರು.

ಭಗತ್ ಸಿಂಗ್ ಅವರ ದೇಶಪ್ರೇಮ ನಮಗೆ ಮಾದರಿ, ಇಂತಹ ಮಹಾನ್ ದೇಶಪ್ರೇಮಿಗಳು ಹುಟ್ಟಿರುವುದು ಭಾರತಾಂಬೆಯ ಮಡಿಲಲ್ಲಿ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಉಳಿವಿಗಾಗಿ ಶಾಂತಿಯುತವಾಗಿ ಒಂದು ತಂಡ ಇದ್ದರೇ ಕ್ರಾಂತಿಕಾರಿಯಾಗಿ ಒಂದು ತಂಡ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಿ ಸ್ವಾತಂತ್ರ್ಯ ಪಡೆಯಲಾಯಿತು ಎಂದು ತಿಳಿಸಿದರು.

ನಂತರ ನಗರ ಯುವ ಭಾರತ್ ಸಂಘಟನೆಯ ಸಂಚಾಲಕ ಬಿ. ಆನಂದ್ ಮಾತನಾಡಿ, ಮಹಾನ್ ದೇಶ ಭಕ್ತ ಕ್ರಾಂತಿಕಾರಿ ಭಗತ್ ಸಿಂಗ್ ರವರ 114ನೇ ಜನ್ಮ ಜಯಂತಿಯಲ್ಲಿ ಭಾಗವಹಿಸಿರುವ ನಾವೆಲ್ಲರೂ ಧನ್ಯರು. ಬ್ರಿಟಿಷ್ ಸರ್ಕಾರವನ್ನು ಕಿತ್ತೊಗಯಲು ಶಾಂತಿಯುತವಾಗಿ ಮಹಾತ್ಮ ಗಾಂಧಿ ಯವರ ಹೋರಾಟ ಮಾಡುತ್ತಿದ್ದರೆ ಅಷ್ಟೇ ಪ್ರಮಾಣದಲ್ಲಿ ಕ್ರಾಂತಿ ಕಾರಿಯಾಗಿ ಭಗತ್ ಸಿಂಗ್, ಸುಖ ದೇವ್, ರಾಜಗುರುರವರು ಹೋರಾಡಿದವರು ಎಂದು ತಿಳಿಸಿದರು.

ಇಂದಿನ ಯುವ ಪೀಳಿಗೆಗೆ ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ರಾಜ್ಯ ಸರ್ಕಾರ ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು ಮತ್ತು ನಗರಪಾಲಿಕೆಯ ವ್ಯಾಪ್ತಿಯಲ್ಲಿ ಭಗತ್ ಸಿಂಗ್ ವೃತ್ತ ಎಂದು ನಾಮಕರಣ ಮಾಡಬೇಕೆಂದು ಅವರು ಒತ್ತಾಯಿಸಿದರು.
.
ಈ ಸಂಧರ್ಭದಲ್ಲಿ ಸ್ವಾಮಿ, ಜ್ಯೋತಿ ಶಾಲೆಯ ಷಡಕ್ಷರಿ, ಮಲ್ಲಣ್ಣ, ಬಾಲು, ಶ್ರೀನಿವಾಸ್, ಕಿರಣ್, ಶಿವು ಮಸಳ್ಳಿ, ರಸೂಲ್, ಮಹೇಶ್, ಧನರಾಜ್, ರಾಜೇಶ್, ಗೋಪಾಲ್, ರಾಜಕುಮಾರ ಇನ್ನಿತರರು ಭಾಗವಹಿಸಿದ್ದರು.