ಪ್ರವಾಸಿ ತಾಣಗಳಿಗೆ ಹೋಗುವ ಪ್ರವಾಸಿಗರು ಪರಿಸರ ಸಂರಕ್ಷಣೆ ಮನೋಭವಾ ಬೆಳಸಿಕೊಳ್ಳಬೇಕಿದೆ -ಎಲ್. ಆರ್. ಮಹದೇವಸ್ವಾಮಿ

ಮೈಸೂರು: ಪ್ರವಾಸಿ ತಾಣಗಳಿಗೆ ಹೋಗುವ ಪ್ರವಾಸಿಗರು ಪರಿಸರ ಸಂರಕ್ಷಣೆ ಮನೋಭವಾ ಬೆಳಸಿಕೊಳ್ಳಬೇಕಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಅವರು ಹೇಳಿದರು.

ವಿಶ್ವ ಪ್ರವಾಸಿಗರ ದಿನಾಚರಣೆ ಅಂಗವಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ಮತ್ತು ಅಪೂರ್ವ ಸ್ನೇಹ ಬಳಗದ ವತಿಯಿಂದ ಮೈಸೂರು ಮೃಗಾಲಯ ಬಳಿ ಸೋಮವಾರ ವಿವಿಧ ದೇಶ-ರಾಜ್ಯಗಳಿಂದ ಬಂದಿದ್ದ ಪ್ರವಾಸಿಗರಿಗೆ ಮೈಸೂರು ಪಾಕ್ ಹಾಗೂ ಗುಲಾಬಿ ಹೂವನ್ನು ನೀಡಿ ಪ್ರವಾಸಿಗರಿಗೆ ಶುಭ ಕೋರಿ ನಂತರ ಎಲ್.ಆರ್ ಮಹದೇವಸ್ವಾಮಿರವರು ಮಾತನಾಡಿದರು.

ಪ್ರವಾಸೋದ್ಯಮಕ್ಕೆ ಅದ್ಭುತ ಅವಕಾಶಗಳು ಇಲ್ಲಿವೆ. ದಕ್ಷಿಣ ಭಾರತದ ಪ್ರಮುಖ ಕೇಂದ್ರವಾಗಿದೆ ಮೈಸೂರು ಎಂದು ಹೇಳಿದರು.

ಮೈಸೂರು ಪ್ರವಾಸಿ ತಾಣಗಳ ಅಭಿವೃದ್ಧಿ ಪರಿಸರಕ್ಕೆ ಪೂರಕವಾಗಿದೆ ಕೆಲವು ಖಾಸಾಗಿ ವಲಯಗಳಲ್ಲಿ ಹಲವು ಕಡೆ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವ ಹಿನ್ನೆಲೆಯಲ್ಲಿ ಮಾನವ ನಿರ್ಮಿತ ಕಟ್ಟಡಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಪ್ರಾಕೃತಿಕ ಆಕರ್ಷಣೆ ಕಳೆದು ಹೋಗಬಾರದು ಎಂದು ಎಚ್ಚರಿಸಿದರು.

ನಂತರ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಎಸ್.ಇ ಗಿರೀಶ್ ಅವರು ಮಾತನಾಡಿ, ಸಂತಸದ ಸಂಕೇತ ಸಿಹಿ. ಆದರೆ ಮೈಸೂರು ಪಾಕ್ ತಿಂದರೆ ಕೆಲವರು ಆರೋಗ್ಯಕ್ಕೆ ಹಾನಿಕರ ಎಂದು ಭಾವಿಸಲಾಗುತ್ತಿದೆ. ಆದರೆ ಮೈಸೂರು ಪಾಕ್ ತಿಂದರೆ ಆರೋಗ್ಯ ವೃದ್ಧಿಸುತ್ತದೆ. ಕಡಲೇ ಹಿಟ್ಟು ಚರ್ಮದ ಕಾಯಿಲೆ ಗುಣಪಡಿಸುತ್ತದೆ. ಸಕ್ಕರೆಯಲ್ಲಿ ಆಮ್ಲಜನಕ ಹೆಚ್ಚಾಗಿದ್ದು. ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ತುಪ್ಪದ ಅಂಶದಿಂದ ಮೂಳೆ ಸವೆತ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ಚಿಕ್ಕ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಮೈಸೂರು ಪಾಕ್ ತಿನ್ನಲು ಅಚ್ಚುಮೆಚ್ಚು ಎಂದು ಹೇಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಯಾಗಿ ಇರುವ ಮೈಸೂರು ಪಾಕ್ ಇಂದು ವಿಶ್ವಾದ್ಯಂತ ತನ್ನ ಹಿರಿಮೆ ಸಾರುತ್ತಿದೆ ಎಂದರು.

ಹಾಗೆಯೇ ಪ್ರವಾಸೋದ್ಯಮ ಇಲಾಖೆ ಮೈಸೂರು ಪಾಕ್ ತಯಾರಿಸುವ ಅಡುಗೆ ಉದ್ಯಮವನ್ನು ಸೃಷ್ಟಿಸಲು
ಮುಂದಾಗಬೇಕು ಎಂದು ಸಲಹೆ ನೀಡಿದರು.

ನಂತರ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ರವರು ಮಾತನಾಡಿ ಮೈಸೂರು ಪಾಕ್ ಮೈಸೂರು ಅರಸರ ಕಾಲದಲ್ಲಿ ಜನಿಸಿದ್ದ ಭಕ್ಷ್ಯ. ಹಿಂದೆಲ್ಲಾ ಮೈಸೂರು ರಾಜ್ಯದಲ್ಲಿ ಬೆಲ್ಲದ ಸಿಹಿ ಮಾತ್ರ ಅಸ್ತಿತ್ವದಲ್ಲಿತ್ತು. ಈಗ ಮೈಸೂರು ಪಾಕ್ ವಿಶ್ವೆದೆಲ್ಲಡೆ ಜನಪ್ರಿಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಮೃಗಾಲಯ ಪ್ರಾಧಿಕಾರ ಸದಸ್ಯರಾದ ಜ್ಯೋತಿ ರೇಚಣ್ಣ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಲಕ್ಷ್ಮೀದೇವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಾಜ್ಯ ಅಭಿವೃದ್ಧಿ ನಿಗಮ ನಿರ್ದೇಶಕ ರೇಣುಕರಾಜ, ರವಿಶಂಕರ್, ಅಜಯ್ ಶಾಸ್ತ್ರಿ, ರಾಕೇಶ್ ಕುಂಚಿಟಿಗ ಹಾಗೂ ಇನ್ನಿತರರು ಹಾಜರಿದ್ದರು.