ಮೈಸೂರು: ಕ್ರಾಂತಿಕಾರಿ ಮಹಾನ್ ದೇಶಭಕ್ತ ಭಗತ್ ಸಿಂಗ್ ಅವರ 114ನೇ ಜಯಂತ್ಯೋತ್ಸವ ಅಂಗವಾಗಿ ಭಗತ್ ಸಿಂಗ್ ಅಭಿಮಾನಿ ಬಳಗ ಹಾಗೂ ವಾರ್ಡ್ ನಂಬರ್ 23ರ ಮೈಸೂರು ನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್ ನೇತೃತ್ವದಲ್ಲಿ ಜೈ ಹಿಂದ್ ಕಾರ್ಯಕ್ರಮವನ್ನು ಸ್ವತಂತ್ರಗಾರರ ಉದ್ಯಾನವನದಲ್ಲಿ ಸೋಮವಾರ ವಿವಿಧ ಜಾತಿಯ ಗಿಡವನ್ನು ನೆಡುವ ಮೂಲಕ ಆಚರಿಸಲಾಯಿತು
ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ ಮಹಾನ್ ದೇಶಭಕ್ತ ಸಿಂಗ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದು ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ತಿಳಿಸಿದರು.
ಭಗತ್ ಸಿಂಗ್ ಅಭಿಮಾನಿ ಬಳಗ ಹಾಗೂ ವಾರ್ಡ್ ನಂಬರ್ 23ರ ಪ್ರಮೀಳಾ ಭರತ್ ವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಏರ್ಪಡಿಸಲಾಗಿದ್ದ ಜೈಹಿಂದ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದು ಭಗತ್ ಸಿಂಗ್ ಯುವ ಜನತೆಗೆ ಪ್ರೇರಣೆಯಾಗಿದ್ದರು ತನ್ನ 23ನೇ ವಯಸ್ಸಿನಲ್ಲಿಯೇ ಅವರು ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಮಹಾನ್ ದೇಶಭಕ್ತರು. ಮದುವೆ ಆಗಲು ನಿರಾಕರಿಸಿದ ಅವರು ದೇಶಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ತಿಳಿಸಿದರು.
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರಕ್ತಸಿಕ್ತ ಭೂಮಿಯನ್ನು ಕಂಡು ಆಗಲೇ ಸ್ವಾತಂತ್ರ್ಯ ಹೋರಾಟದ ಸಂಗ್ರಾಮಕ್ಕೆ ಕಾಲಿಟ್ಟ ಭಗತ್ ಸಿಂಗ್ ಬ್ರಿಟಿಷಗೆ ಎಚ್ಚರಿಕೆ ನೀಡಲು ಅವರು 1929ರಲ್ಲಿ ದೆಹಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆಯುವ ಮೂಲಕ ತಮ್ಮ ಎದೆಗಾರಿಕೆಯನ್ನು ಪ್ರದರ್ಶಿಸಿದ್ದರು ಎಂದರು.
ಆ ನಂತರ ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಖಜಾಂಜಿ ಪಿ. ರಂಗಶೆಟ್ಟಿಯವರು ತನ್ನ ಸಾವಿನಿಂದ ದೇಶದ ಯುವಜನತೆ ರೋಷಾವೇಷದಿಂದ ಬ್ರಿಟಿಷರ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಪಡಿಸುತ್ತೇನೆಂದು ಅರಿತಿದ್ದ ಭಗತ್ ಸಿಂಗ್ ತಮ್ಮ ಮಿತ್ರರಾದ ರಾಜಗುರು ಹಾಗೂ ಸುಖದೇವ ಅವರೊಂದಿಗೆ ಸಂತೋಷದಿಂದ ಬ್ರಿಟಿಷರ ನೇಣಿಗೆ ಕೊರಳೊಡ್ಡಿದ ಮಹಾನ್ ಚೇತನ ಭಗತ್ ಸಿಂಗ್ ಎಂದು ಹೇಳಿದರು.
ಭಗತ್ ಸಿಂಗ್ ಅವರು ತಮ್ಮ ಪ್ರಾಣವನ್ನು ದೇಶಕ್ಕೋಸ್ಕರ ಮುಡಿಪಾಗಿಟ್ಟವರು. ಆದರೆ ಇವತ್ತಿನ ಕಾಲದ ಯುವಕರು ತಮ್ಮ ಜೀವನವನ್ನು ಜೀವನಕ್ಕೆ ಒಂದು ಅರ್ಥವಿಲ್ಲದೆ ಜೀವನವನ್ನು ನಡೆಸುತ್ತಿದ್ದಾರೆ. ಭಗತ್ ಸಿಂಗ್ ಅವರ ಬಲಿದಾನ ತ್ಯಾಗ ಇವೆಲ್ಲದಕ್ಕೂ ಒಂದು ಅರ್ಥ ಸಿಗಬೇಕಾದರೆ ಇವತ್ತಿನ ಯುವಕರು ಅವರ ಜೀವನದ ಚರಿತ್ರೆಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಚಾಮರಾಜ ಕ್ಷೇತ್ರದ ಬಿಜೆಪಿ ಮುಖಂಡರುಗಳಾದ ಸೋಮಶೇಖರ್ ರಾಜು, ದಿನೇಶ್ ಗೌಡ, ಚರಣ್, ಶ್ರೀನಿವಾಸ್, ಸಚಿನ್. ಆರ್, ವಿಘ್ನೇಶ್ವರ ಭಟ್, ಸುರೇಂದ್ರ, ಲಕ್ಷ್ಮಿ, ಆನಂದ್ ಇಳಯಾರ್ ಆಳ್ವಾರ್ ಸ್ವಾಮೀಜಿ, ಸುದರ್ಶನ್, ಕೆಂಪರಾಜು, ಮಂಜುನಾಥ್ , ಪಾಪಣ್ಣ, ಕಾಂತಿಲಾಲ್ ಜೈನ್, ಗಣೇಶ್, ರಚನ, ಲೋಹಿತ್, ಭಗತ್ ಪ್ರಶಾಂತ್, ಸುಕನ್ಯಾ, ಗೋಪಾಲ ಕೃಷ್ಣ ಮತ್ತು ರವಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

