ಮೈಸೂರು: ಮೈಸೂರು ಮೃಗಾಲಯಕ್ಕೆ ಜರ್ಮನಿ, ಸಿಂಗಪೂರ್ ಹಾಗೂ ಮಲೇಶಿಯಾದಿಂದ ಬಂದಿರುವ ಅತಿಥಿಗಳು ಕ್ವಾರಂಟೈನ್ ಆಗಿವೆ.
ಮಲೇಶಿಯಾ, ಸಿಂಗಪೂರ್ನಿಂದ ತಲಾ 2 ಗೋರಿಲ್ಲಾಗಳು ಬಂದಿದ್ದು, ಮಲೇಶಿಯಾದ ಮಾರ್ಲಿನ್ (ಗಂಡು- 16 ವರ್ಷ), ಅಟೀನಾ (ಹೆಣ್ಣು- 12 ವರ್ಷ), ಸಿಂಗಪೂರ್ನ ಆಫಾ (ಗಂಡು- 7 ವರ್ಷ), ಮಿನಿ (ಹೆಣ್ಣು- 5 ವರ್ಷ) ಮೈಸೂರು ಮೃಗಾಲಯದಲ್ಲಿವೆ.
ಎರಡು ಗಂಡು ಗೋರಿಲ್ಲಾಗಳು ಟಬ್ಬೊ (14 ವರ್ಷ), ಡಂಬೋ (8 ವರ್ಷ) ಜರ್ಮನಿಯಿಂದ ಕೊಡುಗೆಯಾಗಿ ಬಂದಿದ್ದು, ಇವಕ್ಕೆ ವಾಸಿಸಲು ಅನುಕೂಲವಾಗುವಂತಹ ಬಿಡಾರದ ವ್ಯವಸ್ಥೆಯನ್ನು ಇನ್ಫೋಸಿಸ್ ಮಾಡಿಕೊಟ್ಟಿದೆ.
ಕೋವಿಡ್ ಮುಂಜಾಗ್ರತೆ ಹಿನ್ನೆಲೆಯಲ್ಲಿ ಅವುಗಳನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಇವುಗಳನ್ನು ಶೀಘ್ರವೇ ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗುತ್ತದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ತಿಳಿಸಿದ್ದಾರೆ.

