ಸ್ಥಳೀಯ ಆಹಾರ ಸೇವಿಸಿ -ನಗರಪಾಲಿಕೆ ಸದಸ್ಯೆ ಪ್ರಮೀಳಾ

ಮೈಸೂರು: ನಗರದ ದೇವರಾಜ್ ಮೊಹಲ್ಲಾದ ದೇವರಾಜ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ
ಹಮ್ಮಿಕೊಂಡಿದ್ದ ಪೆÇೀಷಣ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮೈಸೂರು ಮಹಾನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯವಾಗಿ ಸಿಗುವ ಆಹಾರ ಪದಾರ್ಥಗಳಲ್ಲೇ ಸಾಕಷ್ಟು ಪ್ರಮಾಣದಲ್ಲಿ ಪೆÇ್ರೀಟಿನ್, ವಿಟಮಿನ್ ಇತರ ಪೆÇೀಷಕಾಂಶಗಳು ಇರುತ್ತವೆ. ಅವುಗಳನ್ನು ಸಮರ್ಪಕವಾಗಿ ಸೇವಿಸಬೇಕು ಎಂದು ಮಕ್ಕಳಿಗೆ ತಿಳಿಸಿದರು.

ಸ್ಥಳೀಯವಾಗಿ ಸಿಗುವ ದೊಡ್ಡಪತ್ರೆ, ಕುಂಬಳಕಾಯಿ, ಪಪ್ಪಾಯ, ಹಾಗಲ ಕಾಯಿ, ಸೀತಾಫಲ ಇನ್ನಿತರ ಹಣ್ಣು, ತರಕಾರಿಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ದೇಹ ಸದೃಢವಾಗಿದ್ದರೆ ಮನಸ್ಸು ಅಷ್ಟೇ ಸದೃಢವಾಗಿರುತ್ತದೆ. ಆರೋಗ್ಯವಂತ ಮಕ್ಕಳಿಂದ ಉತ್ತಮ ಸಮಾಜ ಕಟ್ಟಬಹುದು ಎಂದು ಅವರು ತಿಳಿಸಿದರು.

ಅಪೌಷ್ಟಿಕತೆ, ರಕ್ತಹೀನತೆ ಕಡಿಮೆ ಮಾಡುವುದು, ತಾಯಿ, ಶಿಶು ಮರಣ ತಗ್ಗಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಶಿವೇಗೌಡ, ಶಾಲೆಯ ಮುಖ್ಯೋಪಾಧ್ಯಾಯ ಮಹಾದೇವ್, ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ರಾಜಗೋಪಾಲ್, ವಿಘ್ನೇಶ್ವರ ಭಟ್, ಚರಣ್, ಸನತ್, ಗೌರಿ, ವಿನೂತ್, ಶಾಲಾ, ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.