ಜಂಬೂ ಸವಾರಿ ಮೆರವಣಿಗೆಯಲ್ಲಿ ಕೇವಲ 6 ಸ್ತಬ್ಧ ಚಿತ್ರ ಸಾಗಿಬರಲಿವೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಈ ಬಾರಿ 6 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿ ಬರಲಿವೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೈಸೂರು ಕುರಿತ ಮಾಹಿತಿಯ ಸ್ತಬ್ಧ ಚಿತ್ರ, ಪರಿಸರ ಇಲಾಖೆಯಿಂದ ಬೇಡ ನನಗೆ ಕೊಡಲಿ, ನೆರಳನೇಕೆ ಕೊಡಲಿ ಸ್ತಬ್ಧಚಿತ್ರ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಮಗ್ರ ಕೃಷಿ, ಆರೋಗ್ಯ ಇಲಾಖೆಯಿಂದ ಕೊರೊನಾ ಮುಕ್ತ ಕರ್ನಾಟಕ ಹಾಗೂ ಮೈಸೂರು ದಸರಾ ಉಪಸಮಿತಿಯಿಂದ ಆಜಾದ್ ಕಾ ಅಮೃತ ಮಹೋತ್ಸವ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. ಅರಮನೆ ವಾದ್ಯಗೋಷ್ಠಿಯ ಸ್ತಬ್ಧಚಿತ್ರದ ತಯಾರಿಕೆಗೆ ಸಿದ್ದತೆ ನಡೆಯುತ್ತಿದೆ.

ಅ. 15ರಂದು ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.

ಜಂಬೂಸವಾರಿ ಮೆರವಣಿಗೆಗೆ ಸ್ತಬ್ಧಚಿತ್ರಗಳು ಸಿದ್ದವಾಗುತ್ತಿವೆ. ಪ್ರತಿ ಬಾರಿ 45ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಭಾಗಿಯಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಅರಮನೆಯ ಆವರಣದೊಳಗಷ್ಟೇ ಜಂಬೂ ಸವಾರಿ ನಡೆಯುವುದರಿಂದ 6 ಸ್ತಬ್ಧಚಿತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ.