ಮೈಸೂರು,ಅ.12- ಮೈಸೂರು ದಸರಾ ಮಹೋತ್ಸವದ ಆಕರ್ಷಣೆ ಜಂಬೂಸವಾರಿಯ ದಿನವಾದ ಅ. 15ರಂದು ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ನಗರದ ಹಲವೆಡೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿ ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅರಮನೆಯ ಸುತ್ತ ಬಿ.ಎನ್ ರಸ್ತೆ, ಪುರಂದರ ರಸ್ತೆ, ಹಳೆ ಸಯ್ಯಾಜಿರಾವ್ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆಗಳಲ್ಲಿ ಭದ್ರತಾ ಶಿಷ್ಟಾಚಾರವುಳ್ಳ ವಾಹನಗಳು, ಅಗತ್ಯ, ತುರ್ತು ಸೇವಾ ವಾಹನಗಳಿಗಷ್ಟೇ ಸಂಚಾರಕ್ಕೆ ಅವಕಾಶವಿದೆ. ಅರಮನೆಯ ಸುತ್ತ ವಾಹನಗಳನ್ನು ನಿಲ್ಲಿಸುವಂತಿಲ್ಲ.
ಹಳೆ ಸಯ್ಯಾಜಿರಾವ್ ರಸ್ತೆ ಮೂಲಕ ಅರಮನೆಯ ಬ್ರಹ್ಮಪುರಿ ದ್ವಾರದಲ್ಲಿ ಪ್ರವೇಶಿಸುವ ರಾಜಮನೆತನದ ಸದಸ್ಯರು ಮತ್ತು ಕುಸ್ತಿ ಜಟ್ಟಿಗಳಿಗೆ, ಅರಮನೆಯ ಕರಿಕಲ್ಲು ತೊಟ್ಟಿ ದ್ವಾರದಲ್ಲಿ ಪ್ರವೇಶಿಸುವ ಗಣ್ಯರು, ಕಲಾತಂಡಗಳ ಸದಸ್ಯರು, ದಸರಾ ವಿಶೇಷ ಕರ್ತವ್ಯದ ನಿಮಿತ್ತ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಅನ್ವಯಿಸುವುದಿಲ್ಲ ಎಂದಿದ್ದಾರೆ.
ಬಸ್ ಮಾರ್ಗದಲ್ಲಿಯೂ ಬದಲಾವಣೆ
ಮೈಸೂರು ಬೆಂಗಳೂರು ರಸ್ತೆ ಮೂಲಕ ನಗರಕ್ಕೆ ಬರುವ, ಹೋಗುವ ಬಸ್ ಗಳ ಮಾರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಹುಣಸೂರು, ಮಡಿಕೇರಿ, ಹಾಸನ ಕಡೆಯಿಂದ ಬರುವ ಬಸ್ ಗಳು ಕೆ.ಎಂ.ಕಾರ್ಯಪ್ಪ ವೃತ್ತದ ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ, ನಂಜನಗೂಡು ರಸ್ತೆ ಮೂಲಕ ರಾಜಹಂಸ ಜಂಕ್ಷನ್, ಟ್ರಕ್ ಟರ್ಮಿನಲ್, ಮೃಗಾಲಯ ರಸ್ತೆ, ಸರ್ಕಾರಿ ಭವನದ ಉತ್ತರ ದ್ವಾರ, ನವಾಬ್ ಹೈದರಾಲಿ ಖಾನ್ ವೃತ್ತದ ಮೂಲಕ ಗ್ರಾಮಾಂತರ ಬಸ್ ನಿಲ್ದಾಣ ತಲುಪಬೇಕು.
ನಂಜನಗೂಡು, ಚಾಮರಾಜನಗರ, ಗುಂಡ್ಲುಪೇಟೆ ಕಡೆಯಿಂದ ಬರುವ ಬಸ್ ಗಳು ರಾಜಹಂಸ ಜಂಕ್ಷನ್‍ನಿಂದ ಟ್ರಕ್ ಟರ್ಮಿನಲ್, ಮೃಗಾಲಯ ರಸ್ತೆ, ಸರ್ಕಾರಿ ಭವನದ ಉತ್ತರ ದ್ವಾರ ನವಾಬ್ ಹೈದರಾಲಿ ಖಾನ್ ವೃತ್ತದ ಮೂಲಕ ಬಸ್‍ನಿಲ್ದಾಣ ತಲುಪಬೇಕು.
ಹೆಚ್.ಡಿ.ಕೋಟೆ ರಸ್ತೆ ಮೂಲಕ ಬರುವ ಬಸ್ ಗಳು ಮಾನಂದವಾಡಿ ರಸ್ತೆಯಲ್ಲಿ, ಎನ್ ಐಇ ಕಾಲೇಜು ಜಂಕ್ಷನ್, ಜೆಎಲ್ ಬಿ ರಸ್ತೆ, ಗಣಪತಿ ಸಚ್ಚಿದಾನಂದ ವೃತ್ತ, ಟ್ರಕ್ ಟರ್ಮಿನಲ್ ಮೃಗಾಲಯ ರಸ್ತೆ, ಸರ್ಕಾರಿ ಭವನದ ಉತ್ತರ ದ್ವಾರ, ನವಾಬ್ ಹೈದರಾಲಿ ಖಾನ್ ವೃತ್ತದ ಮೂಲಕ ಹಾಗೂ ತಿ.ನರಸೀಪುರ, ಮಳವಳ್ಳಿ ಮೂಲಕ ಬರುವ ಬಸ್ ಗಳು ಮಲೆಮಹದೇಶ್ವರ ರಸ್ತೆಯ ಮೂಲಕ ಡೇರಿ ಸರ್ಕಲ್, ಶಾಂತವೇರಿ ಗೋಪಾಲಗೌಡ ವೃತ್ತ, ಸರ್ಕಾರಿ ಭವನದ ಉತ್ತರ ದ್ವಾರ, ನವಾಬ್ ಹೈದರಾಲಿ ಖಾನ್ ವೃತ್ತದ ಮೂಲಕ ನಿಲ್ದಾಣ ತಲುಪಬೇಕು ಎಂದವರು ತಿಳಿಸಿದ್ದಾರೆ.
ನಗರ ಸಾರಿಗೆ ಬಸ್ ನಿಲುಗಡೆಗೆ
ಕುವೆಂಪುನಗರ, ಸರಸ್ವತಿ ಪುರಂ ಕಡೆಯಿಂದ ಬರುವ ಮತ್ತು ಹೋಗುವ ನಗರ ಸಾರಿಗೆ ಬಸ್ ಗಳಿಗೆ ರಾಮಸ್ವಾಮಿ ವೃತ್ತದ ಸಮೀಪದ ಏಕಲವ್ಯ ವೃತ್ತ ಜೆ.ಪಿ.ನಗರ, ವಿದ್ಯಾರಣ್ಯಪುರಂ ಕಡೆಯಿಂದ ಬರುವ ಬಸ್‍ಗಳಿಗೆ ಎನ್. ಮಾಧವರಾವ್ ವೃತ್ತದ ಬಳಿ, ಕೆ.ಆರ್.ಎಸ್, ಇಲವಾಲ ಕಡೆಯಿಂದ ಬರುವ ಬಸ್ ಗಳಿಗೆ ದಾಸಪ್ಪ ವೃತ್ತ. ಎನ್.ಆರ್ ಮೊಹಲ್ಲಾ, ಕೆಸರೆ, ಉದಯಗಿರಿ ಕಡೆಯಿಂದ ನಗರಕ್ಕೆ ಬರುವ ಬಸ್ ಗಳಿಗೆ ನವಾಬ್ ಹೈದರಾಲಿ ಖಾನ್ ವೃತ್ತ, ಆಲನಹಳ್ಳಿ, ಪೆÇಲೀಸ್ ಲೇಔಟ್ ಮತ್ತು ಲಲಿತಾದ್ರಿಪುರ ಕಡೆಯಿಂದ ಬರುವ ಬಸ್ ಗಳಿಗೆ ಡೇರಿ ಸರ್ಕಲ್ ಸಮೀಪದ ವಾಯುವಿಹಾರ ಮಾರ್ಗದಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

