ಮೈಸೂರು: ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಯ ವಿಚಾರವಾಗಿ ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರದ ಜೊತೆ ಚರ್ಚಿಸಬೇಕು. ಈ ಸಮಸ್ಯೆ ಬಗೆಹರಿಯುವವರೆಗೆ ಬಾಂಗ್ಲಾದೇಶದ ಜೊತೆಗಿನ ಎಲ್ಲ ವ್ಯಾಪಾರ ವಹಿವಾಟು ನಿಲ್ಲಿಸಬೇಕು ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಒತ್ತಾಯಿಸಿದ್ದಾರೆ.
ಹಿಂದೂಗಳ ರಕ್ಷಣೆಯ ಸಂಬಂಧ ವಿಶ್ವಸಂಸ್ಥೆಯಲ್ಲಿ ಧ್ವನಿ ಎತ್ತಬೇಕು. ಹಿಂದೂಗಳ ಮೇಲೆ ಆಕ್ರಮಣ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲೇಬೇಕು ಎಂದೂ ಆಗ್ರಹಿಸಿದರು.
ನವರಾತ್ರಿ ಸಂದರ್ಭದಲ್ಲಿ ಬಾಂಗ್ಲಾದೇಶದ 315 ದೇವಸ್ಥಾನಗಳ ಮೇಲೆ ಮುಸಲ್ಮಾನರು ಆಕ್ರಮಣ ನಡೆಸಿದ್ದಾರೆ. 1,500ಕ್ಕೂ ಹೆಚ್ಚು ಹಿಂದೂ ಹಿಂದೂ ಜನರು ವಾಸವಿದ್ದ ಮನೆಗಳ ಧ್ವಂಸ ಮಾಡಿದ್ದೂ ಅಲ್ಲದೆ, ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಇದು ತೀರಾ ಖಂಡನೀಯ ಎಂದು ಅವರು ಹೇಳಿದರು.

