ಏನ್ಲಾ ರಾಹುಲ್ ಗಾಂಧಿ ಅನ್ನಿ ಎಂದು ಸಿದ್ದರಾಮಯ್ಯರಿಗೆ ಹೆಚ್. ವಿಶ್ವನಾಥ್ ಸವಾಲು

ಮೈಸೂರು: ಏನ್ಲಾ ರಾಹುಲ್ ಗಾಂಧಿ ಅನ್ನಿ.   ನಿಮ್ಮ ಅಧಿನಾಯಕಿಗೆ ಏನಮ್ಮ ಅನ್ನಿ ಎನ್ನುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ವಿಧಾನ ಪರಿಷತ್‌ ಸದಸ್ಯ ಹೆಚ್.‌ ವಿಶ್ವನಾಥ್‌ ಸವಾಲು ಹಾಕಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಹೆಚ್.‌ ವಿಶ್ವನಾಥ್‌ ಮಾತನಾಡಿದರು.

ಏಕವಚನದಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳನ್ನು ಸಂಭೋದಿಸೋದು ಎಷ್ಟು ಸರಿ ? ನಾನು ಮಾತನಾಡೋದೇ ಹೀಗೆ ಅಂತೀರಿ.  ಹಾಗಾದ್ರೆ ಏನ್ಲಾ ರಾಹುಲ್ ಗಾಂಧಿ ಅನ್ನಿ.   ನಿಮ್ಮ ಅಧಿನಾಯಕಿಗೆ ಏನಮ್ಮ ಅನ್ನಿ ಎಂದರು.

ಮುಖ್ಯಮಂತ್ರಿ, ಪ್ರಧಾನಿಗಳನ್ನು ಏಕವಚನದಲ್ಲಿ ಮಾತನಾಡೋದು ಸಭ್ಯ ಸಮಾಜದಲ್ಲಿ ಸಣ್ಣತನ ಎಂದು ವಿಶ್ವನಾಥ್‌ ಸಿದ್ದರಾಮಯ್ಯನವರಿಗೆ ಹೇಳಿದರು.   

ಕುರಿ, ಕಂಬಳಿ ಸಮುದಾಯದ ಸೊತ್ತು. ಯಾವುದೇ ಜಾತಿಯ ಸ್ವತ್ತಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಕುರಿ, ಕಂಬಳಿ ಸಮುದಾಯದ ಸೊತ್ತು. ಯಾವುದೇ ಜಾತಿಯ ಸ್ವತ್ತಲ್ಲ.  ನೀವು ಸಂಕುಚಿತವಾದಂತೆ ಕುರುಬರು ಐಸೋಲೇಟ್ ಆಗಿ ಬಿಡ್ತಾರೆ.  ಕುರುಬರು ಏಕಾಂಗಿಯಾಗುವ ಅಪಾಯವಿದೆ.  ಇದನ್ನು ನೀವು ಗಮನದಲ್ಲಿ ಇಟ್ಟುಕೊಂಡು ಮಾತನಾಡಿ ಎಂದರು.

ಹಾನಗಲ್ ಉಪಚುನಾವಣೆಗೆ ಮತ ಕೇಳುವಾಗ ಕುರುಬರು, ಕಂಬಳಿ ಸೇರಿದಂತೆ ಬೇಡವಾದ ವಿಚಾರ ಪ್ರಸ್ತಾಪ ಆಗ್ತಿದೆ. ಬೇಡವಾದ ವಿಚಾರಗಳೇ ಜನರನ್ನು ಕೆಣಕ್ತಿರೋದು. ಇದು ಚುನಾವಣೆಗೆ, ರಾಜಕಾರಣಿಗಳಿಗೆ ಶೋಭೆ ತರುವಂತಹದಲ್ಲ ಎಂದವರು ರಾಜಕಾರಣಿಗಳಿಗೆ ಕಿವಿ ಮಾತು ಹೇಳಿದರು.

ಕಾಗಿನೆಲೆ ಪೀಠಕ್ಕೆ ಯಾರೇ ಹೋದರೂ ಕಂಬಳಿ‌ಹೊದಿಸಿ ಗೌರವ ತೋರುತ್ತಾರೆ. ಅದೇ ರೀತಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಹೊದಿಸಿದ್ದಾರೆ. ಅದನ್ನೇ ಸಿದ್ದರಾಮಯ್ಯ ಬಹಳ ದೊಡ್ಡ ಅಪರಾಧ ಎನ್ನುವಂತೆ ಮಾತಾಡುತ್ತಿದ್ದಾರೆ. ಅವ ಏನ್ ಕುರುಬನೇನ್ರಿ ಅಂತ ಏಕ ವಚನದಲ್ಲಿ ಮಾತಾಡುತ್ತಿರೋದು ಯಾರಿಗೂ ಶೋಭೆ ತರವಂತದ್ದಲ್ಲ.  ಜನ ಸಂಪ್ರದಾಯವಾಗಿ ಕಂಬಳಿ ಹೊದಿಸಿದ್ದನ್ನು ಪ್ರಶ್ನೆ ಮಾಡೋದು ಬಹಳ ಸಣ್ಣತನ ಎಂದರು.

ಸಿದ್ದರಾಮಯ್ಯ ಸಂಕುಚಿತ ಆದಂತೆ ಕುರುಬರು ಏಕಾಂಗಿಗಳಾಗುತ್ತಾರೆ. ಇದರ ಅಪಾಯ ಮನಗಂಡು ಎಚ್ಚರಿಕೆಯಿಂದ ಮಾತನಾಡಿ. ರಾಜಕಾರಣದಲ್ಲಿ ನೀವು ಏಕಾಂಗಿಗಳಾಗಿಬಿಡುತ್ತೀರಿ. ಯಾರೂ ಕೂಡ ಏಕಾಂಗಿಯಾಗಿ ಏನೂ ಮಾಡಲು ಆಗಲ್ಲ ಎಂದು ವಿಶ್ವನಾಥ್‌ ಹೇಳಿದರು.