ಉಪಚುನಾವಣೆ ರಾಜಕೀಯ ಧೃವೀಕರಣವಾಗುವುದಿಲ್ಲ -ಸಿಎಂ

ಮೈಸೂರು: ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಬಳಿ ಇರುವ ಕಬಿನಿ ಜಲಾಶಯ ತುಂಬಿ ತುಳುಕುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಬಾಗಿನ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆÉ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ರಾಜ್ಯದಲ್ಲಿ ಜಲಾಶಯ ತುಂಬಿದೆ. ಜಲಾಶಯಗಳಿಗೆ ಬಾಗಿನ ಅರ್ಪಿಸುವುದು ಖುಷಿಯ ವಿಚಾರ. ನಮಗಿಂತ ರೈತರಿಗೆ ಖುಷಿಯಾದರೆ ನಮಗೆ ಸಂತೋಷ ಎಂದರು.

ಈ ಹಿಂದೆ ಕೂಡ ನೀರಾವರಿ ಸಚಿವನಾಗಿ ಬಾಗಿನ ಅರ್ಪಿಸಿದ್ದೇನೆ. ಕಬಿನಿ ಜಲಾಶಯದ ಮುಂದೆ ಬೃಂದಾವನ ಮಾದರಿ ಮಾಡುವ ಪ್ರಸ್ತಾಪ ಹಿಂದಿನಿಂದಲೂ ಇದೆ. ಅದನ್ನೆಲ್ಲ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.

ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿ ಫಲಿತಾಂಶ ಬರಲು ಇನ್ನೂ ಸಮಯ ಇದೆ. ಹಾನಗಲ್ ನಲ್ಲಿ ಈ ರೀತಿಯ ಪೈಪೆÇೀಟಿ ನಿರೀಕ್ಷೆಯಲ್ಲಿದ್ದೆವು. ಯಾವಾಗಲೂ ಅಲ್ಲಿ ಪೈಪೆÇೀಟಿ ಇರುತ್ತೆ. ಟಿಕೆಟ್ ವ್ಯತ್ಯಾಸದಿಂದ ಪೈಪೆÇೀಟಿಯಲ್ಲ. ಮೊದಲಿನಿಂದಲೂ ಆ ಕ್ಷೇತ್ರ ಪೈಪೆÇೀಟಿಯ ಕ್ಷೇತ್ರ. ಇನ್ನು ಬಹಳ ಸುತ್ತುಗಳಿದೆ. ಗೆಲ್ಲುವ ವಿಶ್ವಾಸವಿದೆ ಎಂದರು.

ಉಪಚುನಾವಣೆಗಳು ರಾಜಕೀಯ ಧೃವೀಕರಣವಾಗುವುದಿಲ್ಲ. ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆ ನೋಡಿದ್ದೇವೆ. ಆ ನಿಟ್ಟಿನಲ್ಲೂ ಚರ್ಚೆಯೂ ಅಲ್ಲ ಎಂದು ತಿಳಿಸಿದರು.
ದಿ.ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ ಪುನೀತ್ ರಾಜ್ ಕುಮಾರ್ ಬಗ್ಗೆ ನಮಗೆ ಅಪಾರ ಗೌರವ ಇದೆ. ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ. ಸಿದ್ದರಾಮಯ್ಯ ತಮ್ಮ ಪ್ರಸ್ತಾಪ ಸಲ್ಲಿಸಲಿ. ಸರ್ಕಾರ ಸಮಯ ಸಂದರ್ಭ ನೋಡಿಕೊಂಡು ನಮ್ಮ ಪ್ರಸ್ತಾಪ ಸಿದ್ಧಪಡಿಸುತ್ತೇವೆ. ಎಲ್ಲದಕ್ಕೂ ಒಂದು ನಿಯಮ ಪಾಲನೆ ಇರುತ್ತೆ. ಅದರ ಅಡಿಯಲ್ಲಿ ನಾವು ಸಾಗುತ್ತೇವೆ. ಪುನೀತ್ ರಾಜ್ ಕುಮಾರ್ ಎಲ್ಲಾ ಗೌರವಕ್ಕೂ ಅರ್ಹರು. ಅವರಿಗೆ ಇಂತಹ ಪ್ರಶಸ್ತಿ ನೀಡಲು ಸರ್ವ ಸಮ್ಮತ ಒಪ್ಪಿಗೆ ಇದೆ. ನಿಯಮಗಳನ್ನು ಪರಿಶೀಲನೆ ಮಾಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೊಂದಿಗೆ ಸಚಿವರಾದ ಗೋವಿಂದ ಕಾರಜೋಳ, ಎಸ್ ಟಿ ಸೋಮಶೇಖರ್, ಶಾಸಕರಾದ ಅನಿಲ್ ಚಿಕ್ಕಮಾದು, ಎನ್ ಮಹೇಶ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.