ಮೈಸೂರು: ಪೆಟ್ರೋಲ್ ಮತ್ತು ಡಿಸೇಲ್ ದರ ಕಡಿಮೆ ಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಮೈಸೂರು ನಗರದ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಸಂಭ್ರಮಾಚರಣೆ ಮಾಡಲಾಯಿತು.
ಭಾ.ಜ.ಪ.ಕಾರ್ಯಕರ್ತರು ನಗರದ ಆರ್ ಟಿಒ ಪೆಟ್ರೋಲ್ ಬಂಕ್ ನ ಬಳಿ ಪೆಟ್ರೋಲ್ ಹಾಗೂ ಡಿಸೇಲ್ ಹಾಕಿಸಿಕೊಳ್ಳುವ ಸಾರ್ವಜನಿಕರಿಗೆ ಸಿಹಿ ಹಾಗೂ ಗುಲಾಬಿಯನ್ನು ಕೊಟ್ಟು ಸಂಭ್ರಮಾಚರಣೆ ಮಾಡಲಾಯಿತು.
ನಂತರ ಮಾತನಾಡಿದ ನಗರ ಓ.ಬಿ.ಸಿ.ಅಧ್ಯಕ್ಷ ಜೋಗಿಮಂಜು, ಕೇಂದ್ರ ಹಾಗೂ ರಾಜ್ಯ ಸರ್ಕಾರ ದೀಪಾವಳಿಯ ಉಡುಗೊರೆ ಯಾಗಿ ಪೆಟ್ರೋಲ್ 7 ರೂ ಹಾಗೂ ಡಿಸೇಲ್ 12 ರೂ ಗಳ ಕಡಿಮೆ ಮಾಡಿದ್ದಾರೆ. ರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ ದುಪ್ಪಟ್ಟು ಇದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದಿಂದ ಇಂದು ತೈಲ ಬೆಲೆ ಕಡಿಮೆಯಾಗಿದೆ. ಇದರಿಂದ ಕೇಂದ್ರ ಸರ್ಕಾರದ ಒಂದು ಲಕ್ಷ ಕೋಟಿ ಹಾಗೂ ರಾಜ್ಯ ಸರ್ಕಾರ 2200 ಕೋಟಿ ಹೊರೆ ಯಾಗಿ ಬೊಕ್ಕಸಕ್ಕೆ ನಷ್ಟ ವಾಗಿ ಜನ ಸಾಮನ್ಯರ ಹೊರೆ ಕಡಿಮೆ ಮಾಡಿದ್ದಾರೆಂದರು.
ಈ ಸಂದರ್ಭದಲ್ಲಿ ಓ.ಬಿ.ಸಿ ನಗರ ಅಧ್ಯಕ್ಷ ಜೋಗಿಮಂಜು, ನಗರಪಾಲಿಕೆ ಸದಸ್ಯ ಕೆ.ಜೆ.ರಮೇಶ್, ಮಾಜಿ ನಗರಪಾಲಿಕೆ ಸದಸ್ಯ ಜಯರಾಮ್, ಪ್ರಧಾನ ಕಾರ್ಯದರ್ಶಿ ಗೋಪಾಲ್, ಹರೀಶ್ ಅಂಕಿತ್, ಸೂರಜ್, ಪುರುಷೋತ್ತಮ, ಶಿವಪ್ಪ, ರವಿಕುಮಾರ್, ಸೋಮಶೇಖರ್, ರಾಜೇಶ್ ಮುಂತಾದವರು.

