ಪ್ರೊ.ಜಿ.ಆರ್.ಸುಮಿತ್ರ ಅಪಘಾತದಲ್ಲಿ ಸಾವು

ಮೈಸೂರು: ಮೈಸೂರಿನ ಎಂ.ಎಂ..ಕೆ ಮತ್ತು ಎಸ್.ಡಿ.ಎಂ. ಮಹಿಳಾ ಮಹಾ ವಿದ್ಯಾಲಯದ ಎಲೆಕ್ಟಾçನಿಕ್ಸ್ ವಿಭಾಗ ಮುಖ್ಯಸ್ಥೆ ಪ್ರೊ.ಜಿ.ಆರ್.ಸುಮಿತ್ರ (55) ಅವರು ಅಪಘಾತದಲ್ಲಿ ಅಸುನೀಗಿದ್ದಾರೆ.

ಮೈಸೂರಿನ ಗೋಕುಲಂ ಬಡಾವಣೆಯ ನಿವಾಸಿಯಾಗಿದ್ದು, ಮೈಸೂರು ವಿಶ್ವ ವಿದ್ಯಾನಿಲಯ ಪ್ರಸಿದ್ಧ ಇತಿಹಾಸಕಾರರಾಗಿದ್ದ ಪ್ರೊ.ಜಿ.ಆರ್ ರಂಗಸ್ವಾಮಯ್ಯ ಅವರ ಪುತ್ರಿ.

ಬೆಂಗಳೂರಿನಲ್ಲಿ ತಮ್ಮ ಸಂಬAಧಿಯನ್ನು ವಿದೇಶಕ್ಕೆ ಕಳುಹಿಸಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುವಾಗ ಸಂಭವಿಸಿದ ಅಪಘಾತದಲ್ಲಿ ಸುಮಿತ್ರ ಅವರು ಸಾವನಪ್ಪಿದ್ದಾರೆ.

1990ರಿಂದಲೂ ಎಸ್.ಡಿ.ಎಂ.ಮಹಿಳಾ ಕಾಲೇಜಿನಲ್ಲಿ ಎಲೆಕ್ಟಾçನಿಕ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪುತ್ರ ಹರೀಶ್ ಬಾಬು ಜಿಯಾಲಾಜಿಸ್ಟ್, ಯುರೋಪ್ ನಲ್ಲಿ ನೆಲೆಸಿರುವ ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರು ವಿದ್ಯಾರ್ಥಿಗಳನ್ನು ಅಗಲಿದ್ದಾರೆ.