ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪಿ ಬಂಧನ

ಮೈಸೂರು: ನಗರದ ವಿವಿಧೆಡೆ ದ್ವಿಚಕ್ರ ವಾಹನಗಳ ಕಳವು ಮಾಡಿದ್ದ ಆರೋಪಿನ್ನು ಬಂಧಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರುನಗರದ ರಾಜೀವ್‍ನಗರ 1ನೇ ಹಂತ 5ನೇ ಕ್ರಾಸ್ ನ ಗೌಸ್ ಆಹಮ್ಮದ್ (19) ಬಂಧಿತ ಆರೋಪಿ.

ಬಂಧಿತನಿಂದ ಪೊಲೀಸರು ಒಟ್ಟು 1.35 ಲಕ್ಷ ರೂ. ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ನ. 10ರಂದು ರಾತ್ರಿ ಕುವೆಂಪುನಗರ 3ನೇ ಹಂತ ಎಲ್‍ಐಜಿ 119ರ ಮನೆಯ ಮುಂಭಾಗ ಬೀಗ ಹಾಕಿ ನಿಲ್ಲಿಸಿದ್ದ ಹೀರೊ ಸ್ಕೂಟರ್ ಕಳ್ಳತನವಾಗಿತ್ತು. ಈ ಸಂಬಂಧ ಕುವೆಂಪನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅಪರಾಧ ವಿಭಾಗದ ಸಿಬ್ಬಂದಿ ಉದಯಗಿರಿ ಮಹದೇವಪುರ ಮುಖ್ಯರಸ್ತೆಯಲ್ಲಿ ಸ್ಕೂಟರ್ ಮೇಲೆ ವೀಲಿಂಗ್ ಮಾಡಿಕೊಂಡು ಬರುತ್ತಿದ್ದ ಆರೋಪಿ ಗೌಸ್ ಆಹಮ್ಮದ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳ್ಳತನ ಮಾಡಿರುವ ಸ್ಕೂಟರ್ ಎಂದು ತಿಳಿದು ಬಂದಿತು.

ನಂತರ ಆತನನ್ನು ದಸ್ತಗಿರಿ ಮಾಡಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕುವೆಂಪುನಗರ ಠಾಣೆಯ ಎರಡು ಪ್ರಕರಣಗಳು ಮತ್ತು ಜಯಪುರ ಠಾಣೆಯ ಒಂದು ಪ್ರಕರಣ ಸೇರಿ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿವೆ.

ಡಿಸಿಪಿ ಗೀತಾರವರ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಸಹಾಯಕ ಪೆÇಲೀಸ್ ಆಯಕ್ತ ಎಂ.ಎಸ್. ಪೂರ್ಣಚಂದ್ರ ತೇಜಸ್ವಿರವರ ಉಸ್ತುವಾರಿಯಲ್ಲಿ ಕುವೆಂಪುನಗರ ಪೆÇಲೀಸ್ ಠಾಣೆಯ ಪಿ.ಐ. ಷಣ್ಮುಗ ವರ್ಮ, ಪಿಎಸ್‍ಐ ಇರ್ಷಾದ್, ಪಿಎಸ್‍ಐ ಅನಿಲ್ ಕುಮಾರ್, ಪಿಎಸ್‍ಐ ಗಂಗಾಧರ್, ಜ್ಯೋತ್ಸಾ ರಾಜ್, ಎಎಸ್‍ಐ ಮಹದೇವ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಂಜುನಾಥ, ಯೋಗೇಶ, ಹಜರತ್, ಪುಟ್ಟಪ್ಪ, ನಾಗೇಶ ಅವರುಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.