ಮೈಸೂರು: ಡೆತ್ ನೋಟ್ ಬರೆದಿಟ್ಟು ಟ್ರಾಫಿಕ್ ಎಎಸ್ ಐ ಸಾವಿಗೆ ಶರಣಾಗಿದ್ದಾರೆ.
ಮೈಸೂರು ವಿವಿ ಪುರಂ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್ ಐ ಶಿವಕುಮಾರಸ್ವಾಮಿ (54) ಆತ್ಮಹತ್ಯೆ ಮಾಡಿಕೊಂಡವರು.
ಮೈಸೂರಿನ ಗೌರಿ ಶಂಕರ ನಗರದಲ್ಲಿ ತಮ್ಮ ನಿವಾಸದಲ್ಲಿ ಶಿವಕುಮಾರಸ್ವಾಮಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಕೆ.ಆರ್.ಠಾಣಾ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

