ಮೈಸೂರು: ಜಿಯೋ ಟ್ರೇಲ್ ತಂತ್ರಜ್ಞಾನದ ಮೂಲಕ ಚಾಮುಂಡಿ ಬೆಟ್ಟದ ರಸ್ತೆಯ ದುರಸ್ತಿ ಕಾಮಗಾರಿ ನಡೆಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ಸಚಿವರು ಶನಿವಾರ ಚಾಮುಂಡಿ ಬೆಟ್ಟದಲ್ಲಿ ಮಳೆಯಿಂದಾಗಿ ಮೂರು ಬಾರಿ ಚಾಮುಂಡಿ ಬೆಟ್ಟ-ನಂದಿ ರಸ್ತೆ ಕುಸಿತವಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಸಚಿವರು, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಹೆಚ್ಚು ವಿವರ ನೀಡುವಂತಿಲ್ಲ. ಮಣ್ಣಿನ ಹೀರಿಕೊಳ್ಳುವ ಸಾಮರ್ಥ್ಯ ಮೀರಿ ತೇವಾಂಶ ಹೆಚ್ಚಾದ ಕಾರಣ ರಸ್ತೆ ಕುಸಿದಿದೆ ಎಂದರು.
ತಜ್ಞರ ವರದಿಯಂತೆ ರಸ್ತೆಯನ್ನು ಆಧುನಿಕ ತಂತ್ರಜ್ಞಾನ ಬಳಸಿ ರಿಪೇರಿ ಮಾಡುತ್ತೇವೆ. ಎಲ್ಲೆಲ್ಲಿ ರಸ್ತೆ ಕುಸಿಯಬಹುದು ಎನ್ನುವುದರ ಬಗ್ಗೆ ಚಾಮುಂಡಿ ಬೆಟ್ಟದಲ್ಲಿ ಸರ್ವೇ ಮಾಡಿಸಿಲ್ಲ ಎಂದರು.
ರಸ್ತೆ ದುರಸ್ತಿ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
ಶಾಸಕರಾದ ಜಿ.ಟಿ.ದೇವೇಗೌಡ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಪ್ರಮುಖರು ಸ್ಥಳದಲ್ಲಿದ್ದರು.

