ಮೈಸೂರು ಮಹಾನಗರ ಪಾಲಿಕೆ ತುಘಲಕ್ ದರ್ಬಾರ್ ನಡೆಸುತ್ತಿದೆ -ಶಾಸಕ ಸಾ. ರಾ. ಮಹೇಶ್

ಮೈಸೂರು, ನ. 13- ಮೈಸೂರು ಮಹಾನಗರ ಪಾಲಿಕೆ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಶಾಸಕ ಸಾ. ರಾ. ಮಹೇಶ್ ಆರೋಪಿಸಿದರು.

ಮೈಸೂರಿನಲ್ಲಿನ ತಮ್ಮ ಕಛೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಸಾ. ರಾ. ಮಹೇಶ್ ಅವರು ಮಾತನಾಡಿದರು.

ಮೈಸೂರಿನಲ್ಲಿ ನಿಯಮ ಮೀರಿ ತೆರಿಗೆ ವಸೂಲಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಉದ್ಯಮಿಗಳು ತೆರಿಗೆ ಕಟ್ಟಿಲ್ಲವೆಂದು ಮೈಸೂರು ಮಹಾನಗರ ಪಾಲಿಕೆ ತೆರಿಗೆ ಬಾಕಿ ಬೋರ್ಡ್ ಹಾಕಿರುವುದನ್ನು ಶಾಸಕ ಸಾ.ರಾ.ಮಹೇಶ್‌ಖಂಡಿಸಿದರು.

ಬೆAಗಳೂರಿನಲ್ಲಿಯೂ ಈ ಮಟ್ಟದ ಟ್ಯಾಕ್ಸ್ ಹಾಕುತ್ತಿಲ್ಲ. ಈಗಾಗಲೇ ಮೈಸೂರಿನಲ್ಲಿ 8 ಚಿತ್ರಮಂದಿರ ಮುಚ್ಚಿವೆ, ಉದ್ಯಮಗಳು ನಾಶವಾಗುತ್ತಿವೆ. ಪಾಲಿಕೆ ಮನಸೋ ಇಚ್ಛೆ ಟ್ಯಾಕ್ಸ್ ಹಾಕಿದರೆ ಸಾರ್ವಜನಿಕರ ಪರಿಸ್ಥಿತಿ ಏನು ಎಂದು ಅವರು ಪ್ರಶ್ನಿಸಿದರು.

ನನ್ನ ಕನ್ವೆನ್ಶನ್ ಹಾಲ್ ಗೆ ನಿಯಮದ ಪ್ರಕಾರ 4 ಲಕ್ಷ ತೆರಿಗೆ ವಿಧಿಸಬೇಕು. ಆದರೆ ಮೈಸೂರು ಪಾಲಿಕೆ 8.75ಲಕ್ಷ ತೆರಿಗೆ ವಿಧಿಸಿದೆ. ಅಧಿಕ ತೆರಿಗೆ ವಸೂಲಿ ಬಗ್ಗೆ ಸಾಕಷ್ಟು ಉದ್ಯಮಿಗಳು ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಅವರು ತಿಳಿಸಿದರು.

ನೀವು ಕಾನೂನು ರೀತಿ ತೆರಿಗೆ ವಿಧಿಸಿದರೆ ಕಟ್ಟಲು ಸಿದ್ಧರಿದ್ದಾರೆ. ಕಾನೂನು ಬಾಹಿರ ಟ್ಯಾಕ್ಸ್ ಮಾಡಿ ಕಟ್ಟದ ಸಂದರ್ಭದಲ್ಲಿ ಬ್ಯಾನರ್ ಹಿಡಿದುಕೊಂಡು ಹೋಗಿ ಅವರ ಮೇಲೆ ದಬ್ಬಾಳಿಕೆ ಮಾಡಿದರೆ ಇದರಿಂದ ಶಾಂತಿ ಭಂಗವಾದರೆ ಪಾಲಿಕೆಯೇ ನೇರ ಹೊಣೆ ಎಂದು ಶಾಸಕ ಸಾ.ರಾ. ಮಹೇಶ್ ಎಚ್ಚರಿಕೆ ನೀಡಿದರು.

ಜಿ.ಟಿ.ದೇವೇಗೌಡರ ಕುಟುಂಬದವರೇ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾದರೂ ಅಚ್ಚರಿಪಡಬೇಕಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಈ ಸಂದರ್ಭದಲ್ಲಿ ಹೇಳಿದರು.

ನಮ್ಮ ನಾಯಕರಾದ ಶಾಸಕ ಜಿ.ಟಿ.ದೇವೇಗೌಡರ ನೇತೃತ್ವದಲ್ಲೇ ವಿಧಾನಪರಿಷತ್ ಚುನಾವಣೆ ಎದುರಿಸಲಿದ್ದು, ಅವರ ಕುಟುಂಬದವರೇ ಅಭ್ಯರ್ಥಿ ಆದರೂ ಆಶ್ಚರ್ಯ ಪಡಬೇಕಿಲ್ಲ ಎಂದರು.

ಪ್ರಶ್ನೆಯೊAದಕ್ಕೆ ಉತ್ತರಿಸಿದ ಸಾರಾ ಮಹೇಶ್, ಸಂದೇಶ್ ನಾಗರಾಜ್ ಅವರು ಯಾವತ್ತು ಚುನಾವಣೆ ಆಯಿತೋ ಅಂದಿನಿAದಲೂ ನಮ್ಮ ಜೊತೆ ಎಲ್ಲಿದ್ದಾರೆ. ಅವರು ನಮ್ಮ ಜೊತೆ ಗುರ್ತಿಸಿಕೊಂಡಿಲ್ಲ. ಈಗ ಆ ವಿಚಾರ ಅಪ್ರಸ್ತುತ ಎಂದರು.

ನಮ್ಮ ಪಕ್ಷದಲ್ಲಿ ಐದು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕಡೆಗೆ ಅಚ್ಚರಿಯ ಅಭ್ಯರ್ಥಿಯ ಆಯ್ಕೆಯಾಗಬಹುದು ಎಂದು ಹೇಳಿದರು.

ಬಿಟ್ ಕಾಯಿನ್ ಹಗರಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ನನಗೆ ಬಿಟ್ ಕಾಯಿನ್ ಅಂದರೇನೆ ಗೊತ್ತಾಗಿದ್ದು 15 ದಿನದ ಹಿಂದೆ. ನನಗೆ ಬಿಟ್ ಕಾಯಿನ್ ಗೊತ್ತಿಲ್ಲ. ಅದರ ಬೆಲೆಯೂ ಗೊತ್ತಿಲ್ಲ. ಜನರಿಗೆ ವೈಟ್ ಮನಿ, ಬ್ಲಾಕ್ ಮನಿ ಗೊತ್ತಿತ್ತು. ಆದರೆ ಬಿಟ್ ಮನಿ ಗೊತ್ತಿರಲಿಲ್ಲ. ಈಗ ಗೊತ್ತಾಗುತ್ತಿದೆ ಎಂದರು.