ಮೈಸೂರು: ಇನ್ನು ಮೂರು ದಿನಗಳಲ್ಲಿ ಜೆಡಿಎಸ್ ಗೆ ಅಧಿಕೃತವಾಗಿ ರಾಜೀನಾಮೆ ನೀಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಘೋಷಿಸಿದ್ದಾರೆ.
ಸಂದೇಶ್ ನಾಗರಾಜ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಜೆಡಿಎಸ್ ಗೆ ರಾಜೀನಾಮೆ ನೀಡಿ ಮೈಸೂರಿನ ಬಿಜೆಪಿ ಕಚೇರಿಯಲ್ಲೆ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ.
ನನ್ನ ಅಗತ್ಯ ಎಚ್.ಡಿ ಕುಮಾರಸ್ವಾಮಿ ಅವರಿಗೆ ಇದ್ದಂತಿಲ್ಲ. ಅಗತ್ಯವಿಲ್ಲದ ಕಡೆ ನಾನು ಯಾಕೆ ಇರಬೇಕು. ಕಳೆದ ಮೂರು ವರ್ಷಗಳಿಂದ ನಾನು ಮಾನಸಿಕವಾಗಿ ಬಿಜೆಪಿಯಲ್ಲೆ ಇದ್ದೇನೆ. ದೈಹಿಕವಾಗಿ ಅಷ್ಟೇ ಜೆಡಿಎಸ್ ನಲ್ಲಿದ್ದೆ. ವಿಧಾನ ಪರಿಷತ್ ಒಳಗೂ ನಾನು ಬಿಜೆಪಿ ಪರವೇ ಬಿಲ್ ಗಳಿಗೆ ಕೈ ಎತ್ತಿದ್ದೇನೆ. ಮೂರು ವರ್ಷದಿಂದ ನಾನು ಜೆಡಿಎಸ್ ನಾಯಕರ ಸಂರ್ಪಕದಲ್ಲಿ ಇಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ನನಗೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಸಂದೇಶ್ ನಾಗರಾಜ್ ಹೇಳಿದರು.
ಬಿಜೆಪಿ ಸೇರುವ ದಿನ ನಾನು ಯಾಕೆ ಜೆಡಿಎಸ್ ಬಿಟ್ಟೆ ಎಂಬುದನ್ನು ಸುದ್ದಿಗೋಷ್ಠಿ ನಡೆಸಿ ತಿಳಿಸುತ್ತೇನೆ ಎಂದವರು ಹೇಳಿದರು.

