ಮೈಸೂರು: ಕೊಲೆ, ಸುಲಿಗೆ, ಹಲ್ಲೆ, ವಂಚನೆಯಂತಹ ಪ್ರಕರಣಗಳನ್ನು ಹತ್ತಿಕ್ಕಲು ಮುಂದಾಗಿರುವ ಪೊಲೀಸರು ಮೈಸೂರಿನಲ್ಲಿರುವ ರೌಡಿಶೀಟರ್ ಮನೆಗಳಿಗೆ ದಾಳಿ ನಡೆಸಿದ್ದಾರೆ.
ಮುಂಜಾನೆಯೇ ರೌಡಿಗಳ ಮನೆ ಬಾಗಿಲು ತಟ್ಟಿದ ಪೊಲೀಸರನ್ನು ಕಂಡು ರೌಡಿಶೀಟರ್ ಗಳು ಬೆಕ್ಕಸ ಬೆಗಾಗಿದ್ದಾರೆ.
ರೌಡಿಗಳ ಮನೆಯನ್ನೆಲ್ಲಾ ಜಾಲಾಡಿದಾಗ ಕೆಲವರ ಮನೆಯಲ್ಲಿ ಖಾಲಿ ಚೆಕ್, ಆಸ್ತಿಗಳ ದಾಖಲೆ ಪತ್ರಗಳು, ಅಪಾರ ಪ್ರಮಾಣದಲ್ಲಿ ಮಚ್ಚು, ಲಾಂಗ್, ಚಾಕು, ಡ್ರಾಗರ್ ನಂತಹ ಮಾರಕಾಸ್ತçಗಳು ಪತ್ತೆಯಾಗಿದೆ.
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೆಲ ರೌಡಿಶೀಟರ್ ಗಳು ಸಕ್ರಿಯವಾಗಿದ್ದಾರೆಂಬ ಮಾಹಿತಿ ಪಡೆದ ಪೊಲೀಸರು ಅಮಾಯಕರಿಗೆ ಧಮ್ಕಿ ಹಾಕಿ ಬೆದರಿಸುವುದಾಗಲೀ, ಗಲಾಟೆ, ಘರ್ಷಣೆಯಲ್ಲಿ ಭಾಗವಹಿಸುವುದಾಗಲೀ, ಚೀಟಿ, ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ದಂಧೆಯಲ್ಲಿ ಭಾಗಿಯಾಗಿ ಕಿರುಕುಳ ನೀಡುವುದು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸರು ದಾಳಿ ವೇಳೆ ರೌಡಿಶೀಟರ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

