ಮೈಸೂರು: ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದ ಮೊಟ್ಟ ಮೊದಲ ಭಾರತೀಯ ಸೇನೆಯ ಮೂರು ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಸೇರಿದಂತೆ 13 ಜನರಿಗೆ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸಂತಾಪ ಸೂಚಿಸಲಾಯಿತು.
ವೀರ ಸಾವರ್ಕರ್ ಯುವ ಬಳಗದ ನೇತೃತ್ವದಲ್ಲಿ ಸಂತಾಪ ಸೂಚಿಸಿ,ಮೊಂಬತ್ತಿ ಹಿಡಿದು ನುಡಿನಮನದ ಮೂಲಕ ಶ್ರದ್ದಾಂಜಲಿ ಸಲ್ಲಿಸಿ, ಮೌನಾಚರಣೆ ಮೂಲಕ ಎಲ್ಲಾ ಮೃತರ ಆತ್ಮಕ್ಕೆ ಸದ್ಗತಿ ಕೋರಲಾಯಿತು.
ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ನಾರಾಯಣ ಗೌಡರು ಮಾತನಾಡಿ “ಸೇನಾ ಮುಖ್ಯಸ್ಥರು, ತಮ್ಮ ಕುಟುಂಬದ ಜೊತೆ ಪ್ರಯಾಣ ಮಾಡುತ್ತಿದ್ದ ವೇಳೆ ಹೆಲಿಕಾಪ್ಟರ್ ಪತನವಾಗಿರುವುದು ಸಂಶಯಾಸ್ಪದವಾಗಿದೆ. ಇದರ ಹಿಂದೆ ಷಡ್ಯಂತ್ರವಿರುವ ಸಾಧ್ಯತೆ ಹೆಚ್ಚಿದೆ, ಆದ ಕಾರಣ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ರಾವತ್ ರವರು ಮೂರು ದಶಕಗಳಿಗೂ ಹೆಚ್ಚಿನ ಅವಧಿಗೆ ಭಾರತದ ಸೇವೆ ಮಾಡಿದ್ದಾರೆ. ಇತ್ತೀಚೆಗೆ ಪ್ರಪಂಚದ ಗಮನ ಸೆಳೆದ ಉರಿ ಸರ್ಜಿಕಲ್ ಸ್ಟ್ರೈಕ್ ಮುನ್ನಡೆಸಿದ್ದನ್ನು ದೇಶದ ಜನ ಮರೆಯಲಾರರು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಗುಣಗಾನ ಮಾಡಿದರು.
ಸಂತಾಪ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕಿ ರೇಣುಕರಾಜ,
ವೀರ ಸಾವರ್ಕರ್ ಯುವ ಬಳಗದ ರಾಕೇಶ್ ಭಟ್,ಸಂದೇಶ್ ಸಾವರ್ಕರ್,ವಿಕ್ರಂ ಅಯ್ಯಂಗಾರ್,ಜೋಗಿ ಮಂಜು, ಅನಿಲ್ ಥಾಮಸ್,ಟಿ. ಎಸ್. ಅರುಣ್ ,ಅಜಯ್ ಶಾಸ್ತ್ರಿ, ಸುಚೇಂದ್ರ ,ಪತ್ರಿಕೆ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರವಿ,ಕಡಕೊಳ ಜಗದೀಶ್, ಮಂಜು,ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ,ಅಪೂರ್ವ ಸುರೇಶ್,ಎಸ್. ಎನ್. ರಾಜೇಶ್, ನವೀನ್ ಕೆಂಪಿ,ರಂಗನಾಥ್,ಮಧುಸೂದನ್,ಮೋಹಿತ್ ಗೌಡ,ಚಂದನ್ ಗೌಡ,ಚಕ್ರಪಾಣಿ,ದುರ್ಗಾಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.

