ಸಂಗೀತ ನಿರ್ದೇಶಕ ಗುರುಕಿರಣ್‌ ಮನೆಯಲ್ಲಿ ಕಳ್ಳತನ

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಬೆಂಗಳೂರು ನಿವಾಸದಲ್ಲಿ ಕಳ್ಳತನ ಮಾಡಲಾಗಿದೆ.

ರೂಂನ ಬೀರುವಿನಲ್ಲಿಟ್ಟಿದ್ದ 2.50 ಲಕ್ಷ ರೂ.ಗಳು ಕಳ್ಳತನವಾಗಿದೆ. ಎರಡು ದಿನಗಳ ಕಾಲ ಕುಟುಂಬಸ್ಥರು ಮನೆಯೆಲ್ಲ ಹುಡುಕಾಡಿದ್ದಾರೆ.

ಎಲ್ಲಾ ಕಡೆ ಹುಡುಕಿದರೂ ಹಣ ಸಿಗದೇ ಇದ್ದಾಗ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ಗುರುಕಿರಣ್ ಅತ್ತೆ ದೂರು ನೀಡಿದ್ದಾರೆ.

ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಮನೆ ಕೆಲಸದವರ ಮೇಲೆ ಗುರುಕಿರಣ್ ಅತ್ತೆ ಕಸ್ತೂರಿ ಶೆಟ್ಟಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮನೆ ಕೆಲಸದಾಕೆ ರತ್ನಮ್ಮ ಅವರನ್ನು ಚಂದ್ರ ಲೇಔಟ್ ಪೊಲೀಸರು ವಿಚಾರಣೆ ನಡೆಸಿದ್ದಾರೆ