ಯಶ್ ಹೊಸ ಚಿತ್ರದ ಟೈಟಲ್ ಲಾಂಚ್

ಬೆಂಗಳೂರು:  ಕೆಜೆಎಫ್ ಚಿತ್ರದ ಮೂಲಕ ವಿಶ್ವಾದ್ಯಂತ ಸದ್ದು ಮಾಡಿದ್ದ ನಟ ರಾಕಿಂಗ್ ಸ್ಟಾರ್ ಯಶ್  ಅಭಿನಯಿಸುತ್ತಿರುವ ಹೊಸಚಿತ್ರದ ಟೈಟಲ್ ಲಾಂಚ್ ಆಗಿದೆ ಅವರ ಅಭಿಮಾನಿಗಳು ತ್ರಿಲ್ ಆಗಿದ್ದಾರೆ.

ನಟ ಯಶ್ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು ಟಾಕ್ಸಿಕ್.ಶುಕ್ರವಾರ ಬೆಳಿಗ್ಗೆ 9.55ಕ್ಕೆ ಲಾಂಚ್‌ ಆಗಿರೋದು ವಿಶೇಷ ಅಂತಾನೆ ಹೇಳಬಹುದು

ಕೆವಿಎನ್ ಪ್ರೊಡಕ್ಷನ್ ನಟ ಯಶ್ ನಟನೆಯ 19ನೇ ಚಿತ್ರ ಟಾಕ್ಸಿಕ್ ಹೆಸರು ರಿವೀಲ್ ಮಾಡಿದೆ.

ಈ ಟಾಕ್ಸಿಕ್ ಚಿತ್ರ 2025 ಏಪ್ರಿಲ್.10 ರಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

ಟ್ಯಾಕ್ಸಿಕ್ ಚಿತ್ರಕ್ಕೆ ಗೀತು ಮೋಹನ್ ದಾಸ್ ಅವರು ನಿರ್ದೇಶನ ನೀಡಿದ್ದಾರೆ. ಕೆಜಿಎಫ್-2 ಚಿತ್ರದ ಒಂದೂವರೆ ವರ್ಷದ ಬಳಿಕ ನಟ ಯಶ್ ಟಾಕ್ಸಿಕ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಟೈಟಲ್ಲೇ‌ ಭಾರೀ ಸದ್ದು ಮಾಡುತ್ತಿದೆ ಇನ್ನು ಫಿಲಂ ಹೇಗಿರಬಹುದೊ ಎಂದು ಯಶ್ ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ.

ಅಂತು ಒಂದೂವರೆ ವರ್ಷದ ನಂತರಯಶ್  ನಟನೆಯ 19ನೇ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ನಿರೀಕ್ಷೆಗೆ ತಕ್ಕಂತೆಯೇ ಭರ್ಜರಿಯಾದ ಟೈಟಲ್ ಅನ್ನೇ ತಮ್ಮ ಚಿತ್ರಕ್ಕೆ ಇಟ್ಟಿದ್ದಾರೆ ಯಶ್.

ಮೊನ್ನೆಯಷ್ಟೇ ಈ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.ಆದರೆ ಈ ಚಿತ್ರಕ್ಕೆ ಕೇವಲ ಒಬ್ಬರು ನಾಯಕಿಯರಲ್ಲ, ಮೂವರು ನಾಯಕಿಯರು ಎನ್ನುವುದು ಲೆಟೆಸ್ಟ್ ಮಾಹಿತಿ.

ಸಾಯಿ ಪಲ್ಲವಿ, ಮೃಣಲಾ ಠಾಕೂರ್ ಹೀಗೆ ಮೂವರು ಹಿರೋಯಿನ್ ಚಿತ್ರದಲ್ಲಿ ಇರಲಿದ್ದಾರೆ.

ಈ ಹೊಸ ಸಿನಿಮಾದ ಟೈಟಲ್ ಡಿ.8ರಂದು ಬೆಳಗ್ಗೆ 9.55ಕ್ಕೆ ಲಾಂಚ್ ಮಾಡುವುದಾಗಿ ರಾಕಿಭಾಯ್ ಘೋಷಣೆ ಮಾಡಿದ್ದರು.

9.55ಕ್ಕೆ ಸಮಯ ನಿಗದಿ ಆಗಿದ್ದು ಏಕೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಲಾಂಚ್ ಮಾಡಿದರೆ ಒಳ್ಳೆಯದಾ ಅಥವಾ ಯಾರಾದರೂ ಅದೇ ಸಮಯವನ್ನು ನಿಗದಿ ಮಾಡಿದ್ದಾರಾ ಎಂಬ ಚರ್ಚೆ ಕೂಡ ಶುರುವಾಗಿದೆ.

ಯಶ್ ಅವರ 19ನೇ ಸಿನಿಮಾ ಇದು. 9+5+5 ಒಟ್ಟು ಮಾಡಿದರೆ 19.

ಹಾಗಾಗಿ ಈ ಸಮಯವನ್ನು ನಿಗದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಯಶ್ ಏನೇ ಮಾಡಿದರೂ ಹೊಸ ರೀತಿಯಲ್ಲಿ ಯೋಚಿಸುತ್ತಾರೆ.