ಕಾಂತಾರ 2 ಫಸ್ಟ್ ಲುಕ್ ರಿಲೀಸ್ – ರಿಷಬ್ ಲುಕ್ ಭಯಂಕರ

ಉಡುಪಿ: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಸೂಪರ್ ಹಿಟ್ ಆಗುತ್ತಿದ್ದಂತೆ ಈ ಚಿತ್ರದ 2 ಭಾಗಕ್ಕೆ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದುದಕ್ಕೆ ರಿಷಬ್ ಒಳ್ಳೆಯ ಸುದ್ದಿ ಕೊಟ್ಟಿದ್ದು ಇಂದೇ ಚಿತ್ರಕ್ಕೆ ಮುಹೂರ್ತ ಕೂಡಿ ಬಂದಿದೆ.

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ʼಕಾಂತಾರʼ ಸಿನಿಮಾದ ಎರಡನೇ ಭಾಗದ ಫಸ್ಟ್‌ ಲುಕ್‌ ಹಾಗೂ ಟೀಸರ್ ಸೋಮವಾರ ಬಿಡುಗಡೆಯಾಯಿತು.

ಸೋಮವಾರ ಬೆಳಿಗ್ಗೆ ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ಸಿನಿಮಾದ ಮೂಹೂರ್ತ ಕಾರ್ಯಕ್ರಮ ನೆರವೇರಿತು.

ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು ವಿನಾಯಕನಿಗೆ ವಿವಿಧ ಪೂಜಾ ಕಾರ್ಯಗಳನ್ನು ಮಾಡಲಾಯಿತು.

ಚಿತ್ರತಂಡ ಫಸ್ಟ್‌ ಲುಕ್‌ ಹಾಗೂ ಟೀಸರ್ ಕೂಡಾ ಬಿಡುಗಡೆ ಮಾಡಿದೆ.

ಹೊಂಬಾಳೆ ಫಿಲ್ಮಸ್ ಲಾಂಛನದಲ್ಲಿ ಮೂಡಿ ಬರಲಿರುವ ಚಿತ್ರದ ಫಸ್ಟ್ ಲುಕ್ ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ.

ಅಘೋರಿ ಅವತಾರದಲ್ಲಿ ರಿಷಬ್ ಅಚ್ಚರಿ ಮೂಡಿಸುತ್ತಿದ್ದಾರೆ. ಶಿವನ ಅವತಾರದ ಮತ್ತೊಂದು ರೂಪವಾಗಿ ರಿಷಬ್ ಬದಲಾಗಿದ್ದಾರೆ.

ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಜಮದಗ್ನಿ ಕೊಡಲಿಯನ್ನು ಹಿಡಿದುಕೊಂಡಿರುವ ಪೋಸ್ಟರ್  ಅಭಿಮಾನಿಗಳಲ್ಲಿ ಚರ್ಚೆ ಹುಟ್ಟು ಹಾಕುತ್ತಿದೆ.

ಕಾಂತಾರ 2 ಏಳು ಭಾಷೆಗಳಲ್ಲಿ ನಿರ್ಮಾಣವಾಗಲಿದ್ದು ಇದೀಗ ಟೀಸರ್ ಕೂಡಾ ಏಳು ಭಾಷೆಗಳಲ್ಲಿ ಬಿಡುಗಡೆ ಯಾಗಿದೆ.

ಮೊನ್ನೆಯಷ್ಟೇ ಸಿನಿಮಾ ಮುಹೂರ್ತ ಕುರಿತು ಪಂಜುರ್ಲಿ ಮತ್ತು ಗುಳಿಗ ದೈವಕ್ಕೆ ಚಿತ್ರತಂಡ ಮೊರೆ ಹೋಗಿದ್ದು, ದೈವಗಳು ಅಸ್ತು ಎಂದಿವೆ  ಹೀಗಾಗಿಯೇ ಸಿನಿಮಾ ತಂಡ ಮುಹೂರ್ತ ನೆರವೇರಿಸಿದೆ.

ಟೀಸರ್ ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಂಗಾಳಿ ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಟೀಸರ್ ನ್ನು ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದೆ.

ಕಾಂತಾರ ಪ್ರೀಕ್ವೆಲ್‌ ಕತೆ ಕದಂಬರ ಕಾಲಕ್ಕೆ ಕರೆದುಕೊಂಡು ಹೋಗಲಿದೆ ಎಂಬುದು ಗೊತ್ತಾಗಿದೆ, ದೈವಿಕ ಭೂಮಿ ಕಡೆಗೆ ಹೆಜ್ಜೆ ಎಂದು ಕಾಂತಾರ ಪ್ರೀಕ್ವೆಲ್‌ ಅನ್ನು ಹೊಂಬಾಳೆ ಫಿಲಂಸ್ ಬಣ್ಣಿಸಿದೆ.