ಮೈಸೂರು: ಚಾಮುಂಡಿಪುರಂನ ಅಪೂರ್ವ ಸ್ನೇಹ ಬಳಗ ವತಿಯಿಂದ ಮಾತೆ ಶ್ರೀ ಶಾರದಾದೇವಿ ಹಾಗೂ ಶ್ರೀ ವೆಂಕಟಾಚಲ ಅವಧೂತ ಸದ್ಗುರುಗಳ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.
ಈ ಜಯಂತಿ ಪ್ರಯುಕ್ತ ವಿದ್ಯಾರಣ್ಯಪುರಂನ ಅಂದಾನಿ ವೃತ್ತದಲ್ಲಿರುವ ಟಿ. ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳು ನೀಡಲಾಯಿತು.
ಕನಕಗಿರಿಯಲ್ಲಿರುವ ಭಾರತಿ ವೃದ್ಧಾಶ್ರಮದ ವೃದ್ಧರಿಗೆ ಹಣ್ಣು ಹಂಪಲು ಹಾಗೂ ಹೊದಿಕೆ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜಯಂತಿ ಆಚರಿಸಲಾಯಿತು.
ಈ ವೇಳೆ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗಳಿಗೆ ಶಾರದಾ ಮಾತೆ ಅವರು ಪ್ರೇರಣೆ,ಆದರೆ ಹಲವರಿಗೆ ಶಾರದಾ ಮಾತೆಯ ಪರಿಚಯವಿಲ್ಲ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಭಾರತದ ಚಿತ್ರಣ ಬದಲಿಸಿತು ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರ ಹಲವು ವೈಚಾರಿಕ ಚಿಂತನೆಗಳಿಗೆ ಶಾರದ ಮಾತೆ ಸ್ಪೂರ್ತಿಯಾಗಿದ್ದರು. ವಿವೇಕಾನಂದರು ಎಂದೆಂದಿಗೂ ಪ್ರಸ್ತುತ. ಯುವಕರು ಅವರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವಿವೇಕಾನಂದರ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ದೇಶಾದ್ಯಂತ ರಾಮಕೃಷ್ಣ ಆಶ್ರಮ ಸ್ಥಾಪಿಸಲಾಗಿದೆ ಎಂದು ಹೇಳಿದರು.
ನಗರಪಾಲಿಕೆ ಸದಸ್ಯರಾದ ಮಾ. ವಿ. ರಾಮ್ ಪ್ರಸಾದ್ ಮಾತನಾಡಿ ವಿವೇಕಾನಂದನಗರ, ರಾಮಕೃಷ್ಣನಗರದ ವೃತ್ತಗಳಲ್ಲಿರುವಂತೆ ಶಾರದಾದೇವಿನಗರದಲ್ಲಿಯೂ ಶಾರದಾಮಾತೆಯ ಪ್ರತಿಮೆ ನಿರ್ಮಾಣವಾಗಬೇಕೆಂದು ಕೋರಿದರು.
ಖ್ಯಾತ ವೈದ್ಯ ಡಾ. ಎಸ್ ಪಿ ಯೋಗಣ್ಣ, ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು ,ವಿಶ್ವಕರ್ಮ ಸಮುದಾಯದ ಮುಖಂಡ ರಿಷಿ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ,ಕೆ. ಆರ್. ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ,ನವೀನ್ ಕೆಂಪಿ ,ಸುಚೇಂದ್ರ , ಹಾಗೂ ಶಾಲೆಯ ಶಿಕ್ಷಕ ವೃಂದ ಹಾಜರಿದ್ದರು.

