ಡಿ. 31ರ ಕರ್ನಾಟಕ ಬಂದ್ ವಾಪಸ್

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮನವಿ ಮೇರೆಗೆ ನಾಳಿ (ಡಿ. 31)ನ ಕರ್ನಾಟಕ ಬಂದ್ ಅನ್ನು ಕೈ ಬಿಡಲಾಗಿದೆ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಾಟಾಳ್ ನಾಗರಾಜ್ ಗುರುವಾರ ಮಾತನಾಡಿದರು.

ಮುಖ್ಯಮಂತ್ರಿಗಳು ಎಂಇಎಸ್ ನಿಷೇಧ ಮಾಡುವ ಭರವಸೆ ನೀಡಿದರು. ಕಾನೂನು ಪ್ರಕಾರ ನಿಷೇಧ ಮಾಡಲು ಪ್ರಯತ್ನ ಮಾಡುತ್ತೇವೆ. ಬಂದ್ ಹಿಂಪಡೆಯಲು ಸಿಎಂ ಮನವಿ ಮಾಡಿದರು. ಅವರ ಮಾತಿಗೆ ಗೌರವ ಕೊಟ್ಟು ಬಂದ್ ವಾಪಸ್ ಪಡೆಯುವುದಾಗಿ ವಾಟಾಳ್ ನಾಗರಾಜ್ ತಿಳಿಸಿದರು.

ಹಲವು ಕನ್ನಡ ಪರ ಸಂಘಟನೆಗಳು ಸೇರಿದಂತೆ ಉದ್ಯಮ ವಲಯದ ಸಂಘಟನೆಗಳು, ಬಂದ್ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.