ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ನವದೆಹಲಿ: ಇಂಡಿಯನ್ ಆಯಿಲ್ ಸಂಸ್ಥ ಹೊಸ ವರ್ಷದಂದು ಜನತೆಗೆ ಗಿಫ್ಟ್ ನೀಡಿದೆ.

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 102.50 ರೂಪಾಯಿ ಕಡಿತಗೊಳಿಸಿದೆ.

ಇಂಡಿಯನ್ ಆಯಿಲ್ 2022ರ ಜ. 1ರಂದು, ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‍ಗಳ ಬೆಲೆಯನ್ನು 102 ರೂ. ಕಡಿತಗೊಳಿಸಲಾಗಿದೆ. ಇದರಂತೆ ದೆಹಲಿಯಲ್ಲಿ 19 ಕೆಜಿಯ ಸಿಲಿಂಡರ್ ರೂ. 1998ಗೆ ದೊರೆಯಲಿದೆ. ಚೆನ್ನೈನಲ್ಲಿ 2,131 ರೂ. ಹಾಗೂ ಮುಂಬೈನಲ್ಲಿ 1948.50, ಕೋಲ್ಕತ್ತಾದಲ್ಲಿ 2076 ರೂ.ಗಳನ್ನು ಗ್ರಾಹಕರು ಪಾವತಿಸಬೇಕು.

ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಬೆಲೆ ಇಳಿಕೆ ಮಾಡಿರುವ ಇಂಡಿಯನ್ ಆಯಿಲ್, ಗೃಹ ಬಳಕೆಯ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಇಳಿಕೆ ಮಾಡಿಲ್ಲ.

ಕಳೆದ ವರ್ಷದ ಡಿಸೆಂಬರ್‍ನಲ್ಲಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ನ ಬೆಲೆಯನ್ನು 100 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು.