ಮುಡಾ: 25 ಕೋಟಿ ರೂ.ಮೌಲ್ಯದ ಸ್ವತ್ತು ವಶ

ಮೈಸೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 25 ಕೋಟಿ ಮೌಲ್ಯದ ಅನಧಿಕೃತ ಶೆಡ್ ಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿದೆ.

ವಿಜಯನಗರ 4 ನೇ ಹಂತ,1ನೇ ಫೇಸ್ ನಲ್ಲಿ ಹಿನಕಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ 50*80 ಅಡಿ ಅಳತೆಯ ಒಟ್ಟು 5 ನಿವೇಶನಗಳಲ್ಲಿದ್ದ ಅನಧಿಕೃತ ಶೆಡ್  ಹಾಗೂ/ಕಟ್ಟಡಗಳನ್ನು  ಮುಡಾ ಅಧಿಕಾರಿಗಳು ಜೆಸಿಬಿ ಸಹಾಯದಿಂದ ತೆರವುಗೊಳಿಸಿದ್ದಾರೆ.

ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಅವರ ನಿರ್ದೇಶನದಂತೆ  ಸೂಕ್ತ ಪೊಲೀಸ್ ಬಂದೋಬಸ್ತ್ ನಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ಮತ್ತು ಕಟ್ಟಡಗಳನ್ನು ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆದು ನಾಮಫಲಕವನ್ನು ಅಳವಡಿಸಲಾಗಿದೆ.

ಈ ಸ್ವತ್ತುಗಳ ಮೌಲ್ಯ ಅಂದಾಜು 25 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆರವು ಕಾರ್ಯಾಚರಣೆ ವೇಳೆ ಅಧೀಕ್ಷಕ ಅಭಿಯಂತರ ಶಂಕರ್, ಭೂಸ್ವಾಧೀನಾಧಿಕಾರಿ ಹರ್ಷವರ್ಧನ್, ಕಾರ್ಯಪಾಲಕ ಅಭಿಯಂತರರುಗಳಾದ ಮೋಹನ್, ಸುನೀಲ್, ವಲಯಾಧಿಕಾರಿಗಳಾದ ಕೆ.ಆರ್.ಮಹೇಶ್, ಕಿರಣ್, ಹೆಚ್.ಪಿ.ಶಿವಣ್ಣ, ನಾಗೇಶ್, ಕೆ.ಸಿ.ರವಿಶಂಕರ್, ರಾಘವೇಂದ್ರ (ವಿದ್ಯುತ್) ಹಾಗೂ ಅಧಿಕಾರಿಗಳು ಹಾಜರಿದ್ದರು.