ಮೈಸೂರು:ಕೊರೋನಾ ಸೊಂಕಿನಿಂದ ಜೀವಕಳೆದುಕೊಂಡವರ ಕುಟುಂಬಗಳು ಇಂದಿಗೂ ದುಃಖದಿಂದ ಹೊರಗೆ ಬಂದಿಲ್ಲ, ಈಗ ಕೊರೊನಾ 3ನೇ ಅಲೆ ಬೇರೆ ಸ್ಪೋಟವಾಗುತ್ತಿದೆ.ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಪಾದಯಾತ್ರೆ ಬೇಕಿತ್ತಾ.
ಜನಸಮೂಹ ಸೇರುವುದರಿಂದ ಸೊಂಕು ಹರಡುವ ಪರಿಣಾಮ ಇನ್ನೂ ಹೆಚ್ಚಿರುತ್ತದೆ, ಪಾದಯಾತ್ರೆಯಿಂದಾಗಿ ಏನಾದರೂ ಸಮಸ್ಯೆಗಳು ಉಲ್ಭಣವಾದರೆ ಕೊರೋನಾ ಹರಡಲು ಕಾಂಗ್ರೆಸ್ ನೇರ ಕಾರಣವಾಗುತ್ತದೆ.
ಸರ್ಕಾರ ಕೊರೋನಾ ಸೊಂಕು ತಡೆಗಟ್ಟಲು ಹಲವು ಕ್ರಮಗಳನ್ನ ಕೈಗೊಂಡಿದ್ದು ಇದನ್ನ ಪಾಲಿಸುವುದು ನಾಗರೀಕರ ಕರ್ತವ್ಯವಲ್ಲವೇ.
ಇತ್ತೀಚೆಗೆ ತಾನೆ ಕಾಂಗ್ರೆಸ್ ನವರು ಮೈಸೂರಿನಲ್ಲಿ ಮೇಕೆದಾಟು ಪೂರ್ವಭಾವಿ ಸಭೆ ನಡೆಸಿದ ಸಂಧರ್ಭದಲ್ಲೇ ರಸ್ತೆ ತಡೆಯಿಂದಾಗಿ ವಾಹನ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿತ್ತು.
ಪರಿಣಾಮ ರೈಲ್ವೆ ನಿಲ್ದಾಣಕ್ಕೆ ತೆರಳಲು ಸಹಸ್ರಾರು ಪ್ರಯಾಣಿಕರು ಪರದಾಡಬೇಕಾಯಿತು.
ಕೆ.ಆರ್ ಆಸ್ಪತ್ರೆಗೆ ತೆರಳಲು ಆಂಬುಲೆನ್ಸ್ ಸೇರಿದಂತೆ ರೋಗಿಗಳು ಕಷ್ಟಪಡುವಂತಾಯಿತು.
ಇದರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಕಾಂಗ್ರೆಸ್ ಸಹಸ್ರಾರು ಮಂದಿಯನ್ನ ಪ್ರಚೋದಿಸಿ ಪಾದಯಾತ್ರೆ ಕೈಗೊಂಡಿದೆ ಎಂದು ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷರಾದ ವಿಕಾಸ್ ಶಾಸ್ತ್ರಿ ಆರೋಪಿಸಿದ್ದಾರೆ.
ಜನರ ಜೀವದ ಕ್ಷೇಮದ ದೃಷ್ಠಿಯಲ್ಲಿ ಸರ್ಕಾರದ ನಿಯಾಮಾನುಸಾರ ಕೋವಿಡ್ ಹರಡುವುದನ್ನ ತಪ್ಪಿಸಲು ಪಾದಯಾತ್ರೆ ಕೈಬಿಟ್ಟರೆ ಒಳ್ಳೆಯದು ಎಂದು ಅವರು ಕಾಂಗ್ರೆಸ್ ನವರಿಗೆ ಸಲಹೆ ನೀಡಿದ್ದಾರೆ.
ಒಂದು ವೇಳೆ ರಾಜಕೀಯ ಹಠಕ್ಕೆ ಬಿದ್ದು ಪಾದಯಾತ್ರೆ ನಡೆಸಿದ್ದೇ ಆದರೆ ಭಾಗವಹಿಸುವ ಕಾರ್ಯಕರ್ತರಿಗೆ ಬಡವರಿಗೆ ಈಗಲೇ ಆರೋಗ್ಯವಿಮೆ, ಜೀವವಿಮೆ ಮಾಡಿಸಲು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆಶಿ ಕರೆ ನೀಡಲಿ ಎಂದು ವಿಕಾಸ್ ಶಾಸ್ತ್ರಿ ಹೇಳಿದ್ದಾರೆ.

