ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಂಜಾಬ್ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆದ ಭದ್ರತಾ ವೈಫಲ್ಯವನ್ನು ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಖಂಡಿಸಿದೆ. ಜತೆಗೆ ಮೋದಿಗೆ ಒಳಿತಾಗಲೆಂದು ಪ್ರಾರ್ಥಿಸಿದೆ
ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರಮೋದಿಯವರ ಆಯುರಾರೋಗ್ಯ ವೃದ್ಧಿಗಾಗಿ ಪ್ರಾರ್ಥಿಸಿ ಮೃತ್ಯುಂಜಯ ಜಪವನ್ನು ಚಾಮುಂಡಿಬೆಟ್ಟದಲ್ಲಿರುವ ಮಹಾಬಲೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಯಿತು.
ಪಕ್ಷದ ಎಲ್ಲಾ ಪದಾಧಿಕಾರಿಗಳು ಮೋದಿ ಅವರಿಗೆ ಒಳಿತಾಗಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್, ನಗರ ಪ್ರಧಾನ ಕಾರ್ಯದರ್ಶಿಗಳಾದ ರೇಣುಕರಾಜು, ಉಪಾಧ್ಯಕ್ಷರಾದ ಆಶಾ ಲಕ್ಷ್ಮೀನಾರಾಯಣ್, ಕಾವೇರಿ, ಸರಸ್ವತಿ ಪ್ರಸಾದ್, ಯಶೋಧರಾಜು,ಕಾರ್ಯದರ್ಶಿ ಮಮತಾ, ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಪ್ರಮೋದಿನಿ, ನಾಗರತ್ನ, ಶೋಭಾ ಸತೀಶ್, ಲಲಿತಾಂಬ ರಾಜೇಶ್ವರಿ ಚಾಮರಾಜ ಕ್ಷೇತ್ರದ ಮಂಡಲ ಅಧ್ಯಕ್ಷರಾದ ತನುಜಾ ಮಹೇಶ್, ಮಹೇಶ್ ಸುನೀತಾ ಉಪಸ್ಥಿತರಿದ್ದರು.

