ಪೊಲೀಸರನ್ನೂ ಕಾಡುತ್ತಿದೆ ಕೊರೋನಾ

ಮೈಸೂರು:ಮೈಸೂರು ಪೊಲೀಸರಲ್ಲೂ ಕೊರೋನಾ ಸೋಂಕು ಹೆಚ್ಚುತ್ತಿದ್ದು ಆತಂಕ ಉಂಟಾಗಿದೆ.

ಮಂಗಳವಾರ ಒಂದೇ ದಿನ ನಗರದ 30 ಪೊಲೀಸರಲ್ಲಿ ಸೋಂಕು ಪತ್ತೆಯಾಗಿದೆ.

ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 74ಕ್ಕೆ ಏರಿಕೆಯಾಗಿದೆ.

ಜಿಲ್ಲಾ ಪೊಲೀಸರಲ್ಲಿ ಹದಿನೈದು ಸಕ್ರಿಯ ಪ್ರಕರಣಗಳಿವೆ. ಎರಡೂ ವಿಭಾಗಗಳನ್ನು ಸೇರಿಸಿದರೆ ಒಟ್ಟು 89ಮಂದಿ ಸೋಂಕಿತರಿದ್ದಾರೆ.

ಹೆಚ್ಚಿನ ಸೋಂಕು ಕಾನ್ ಸ್ಟೇಬಲ್ ಗಳಲ್ಲಿಯೇ ಪತ್ತೆಯಾಗಿದೆ. ಎಲ್ಲರ ಆರೋಗ್ಯ ಸ್ಥಿತಿಯೂ ಸ್ಥಿರವಾಗಿದೆ.

ಇದುವರೆಗೂ 2,326 ಮಂದಿ ಪೊಲೀಸರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ನಗರ ವಿಭಾಗದಲ್ಲಿ 3,116 ಮಂದಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದು ಇವರಲ್ಲಿ 3,106 ಮಂದಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದರೆ 3,098ಮಂದಿ 2ನೇ ಡೋಸ್ ಪಡೆದಿದ್ದಾರೆ.

ಲಸಿಕೆಯ ಬೂಸ್ಟರ್ ಡೋಸ್ ಅನ್ನು ಕೇವಲ 518 ಮಂದಿಯಷ್ಟೇ ತೆಗೆದುಕೊಂಡಿದ್ದಾರೆ.