ಮೈಸೂರು: ಹಬ್ಬದ ಸಾಮಾನುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೆಚ್ಚು, ಹೆಚ್ಚು ಗ್ರಾಹಕರು ಬರುವ ಹಿನ್ನೆಲೆಯಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ದೊಡ್ಡ ಮಾರ್ಕೆಟ್ ಮುಂಭಾಗ ಸಾರ್ವಜನಿಕರಿಗೆ ಉಚಿತ ಮಾಸ್ಕ್ ಹಾಗೂ ಗುಲಾಬಿ ನೀಡಿ ಜಾಗೃತಿ ಮೂಡಿಸಿದುದು ವಿಶೇಷವಾಗಿತ್ತು.
ಮಕರ ಸಂಕ್ರಾಂತಿ, ವೈಕುಂಠ ಏಕಾದಶಿ ಹಬ್ಬಗಳನ್ನ ನಾಗರೀಕರು ಮನೆಯಲ್ಲಿಯೇ ಆಚರಿಸಲು ಮುಂದಾಗಬೇಕು ಜನಸಮೂಹ ಹೆಚ್ಚಾಗಿ ಸೇರಿದರೆ ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ, ಹಿರಿಯ ನಾಗರೀಕರು ಮತ್ತು ಸಣ್ಣ ಮಕ್ಕಳ ಬಗ್ಗೆ ಹೆಚ್ಚು ಗಮನ ವಹಿಸಬೇಕೆಂದು ಈ ವೇಳೆ ದೇವರಾಜ ಠಾಣೆಯ ಸಂಚಾರಿ ವೃತ್ತ ಉಪ ನಿರೀಕ್ಷಕ ಸುಬ್ರಮಣ್ಯ ಸ್ವಾಮಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕೋವಿಡ್ 3ನೇ ಅಲೆ ಸ್ಪೋಟದಿಂದಾಗಿ ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು ಸರ್ಕಾರ ನೈಟ್ ಕರ್ಫ್ಯೂ ಜಾರಿಗೆ ತಂದಿದೆ.
ಆದರೂ ಸಹ ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸದ್ದಿದ್ದರೆ ಅಪಾಯ ಕಟ್ಟಿತ್ತ ಬುತ್ತಿ, ಓಮ್ರಿಕಾನ್ ಸೊಂಕು ಹರುಡುವಿಕೆ ವಿದೇಶದಲ್ಲಿ ಹೆಚ್ಚಿದೆ ಇದರ ಬಗ್ಗೆ ಹಗರವಾಗಿ ಪರಿಗಣಿಸಬಾರದು ಎಂದು ಹೇಳಿದರು.
ನಾಗರೀಕರು ಎರಡು ಲಸಿಕೆಗಳನ್ನ ಹಾಕಿಸಿದರೆ ಒಳಿತು ಮತ್ತು ಹಿರಿಯ ನಾಗರೀಕರು ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದೇವರಾಜ ಪೋಲಿಸ್ ಠಾಣೆಯ ಸಂಚಾರಿ ವೃತ್ತ ನಿರೀಕ್ಷಕರಾದ ಸುಬ್ರಹ್ಮಣ್ಯ ಸ್ವಾಮಿ,
ವೀರಭದ್ರಸ್ವಾಮಿ,ಶ್ರೀನಿವಾಸ್,ಸಂತೋಷ್,ಹಾಗೂ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ ,ಸಾಮಾಜಿಕ ಹೋರಾಟಗಾರ ಮಹೇಂದ್ರ ಎಂ ಶೈವ ,ಪ್ರಮೋದ್ ಗೌಡ, ನವೀನ್ ಮತ್ತಿತರರು ಹಾಜರಿದ್ದರು.

