ಮೈಸೂರು: ಮೇಕೆದಾಟು ಬಂದೋಬಸ್ತ್ ಗೆ ತೆರಳಿದ್ದ ಕೆ.ಎಸ್.ಆರ್.ಪಿ 5ನೇ ಬೆಟಾಲಿಯನ್ ನ 42 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಮೈಸೂರು ಜಿಲ್ಲೆಯಲ್ಲಿ ಸೋಮವಾರ ಒಟ್ಟು 1770 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ.
ಮೇಕೆದಾಟು ಬಂದೋಬಸ್ತ್ ಗಾಗಿ ಮೈಸೂರಿನಿಂದ ಕೆ.ಎಸ್.ಆರ್.ಪಿ 5ನೇ ಬೆಟಾಲಿಯನ್ ನ 200 ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಇವರಲ್ಲಿ 125 ಮಂದಿ ಮೈಸೂರಿಗೆ ಹಿಂತಿರುಗಿದ್ದು, ಅವರನ್ನು ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಗೆ ಒಳಪಡಿಸಿದಾಗ 42 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು 75 ಮಂದಿ ಸಿಬ್ಬಂದಿ ಕೇಂದ್ರ ಸ್ಥಾನಕ್ಕೆ ಇನ್ನೂ ವಾಪಸ್ಸಾಗಿಲ್ಲ ಎಂದು ಕೆ.ಎಸ್.ಆರ್.ಪಿ 5ನೇ ಬೆಟಾಲಿಯನ್ ನ ಕಮಾಂಡೆಂಟ್ ಜನಾರ್ಧನ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೋಮವಾರ 232 ಮಂದಿ ಗುಣಮುಖರಾಗಿದ್ದು, ಇದುವರೆಗೆ 1,88,614 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 1,79,039 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 7141 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಶೇ.27.08% ರಷ್ಟಿದೆ.
ಹೆಚ್.ಡಿ.ಕೋಟೆಯಲ್ಲಿ 23, ಹುಣಸೂರು 60, ಕೆ.ಆರ್.ನಗರ 60, ಮೈಸೂರು ನಗರ 1,354, ಮೈಸೂರು ತಾಲೂಕು 144, ನಂಜನಗೂಡು 53, ಪಿರಿಯಾಪಟ್ಟಣ 29, ಸಾಲಿಗ್ರಾಮ 3, ಸರಗೂರು 3, ತಿ.ನರಸೀಪುರ 71 ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 1,770 ಪ್ರಕರಣ ದೃಢಪಟ್ಟಿದೆ.

