ಕನ್ನಡ – ಸಂಸ್ಕೃತ ಎಂದು ಗದ್ದಲ ಎಬ್ಬಿಸಬೇಡಿ -ವಿಕ್ರಂಅಯ್ಯಂಗಾರ್

ಮೈಸೂರು: ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರ ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ವಿ ವಿ ಸ್ಥಾಪಿಸಲು ಹೊರಟಾಗ ಮೌನವಾಗಿ ಮುದುಡಿ ಕೂತಿದ್ದವರು ಈಗ ಸಂಸ್ಕೃತ ವಿ.ವಿ ಸ್ಥಾಪನೆಗೆ ವಿರೋಧಿಸುವುದರ ಹಿಂದಿನ ಹುನ್ನಾರ ಏನು  ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಛಾಟಿ ಬೀಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತ ಪರಸ್ಪರ ಕೊಡು – ಕೊಳ್ಳುವಿಕೆ ಇರುವ ಎರಡು ಭಾಷೆಗಳು,

ಆದರೆ ಅರಬ್ – ಉರ್ದು ಕನ್ನಡದ ಜೊತೆ ಯಾವುದೇ ಸಂಬಂಧವೆ ಇಲ್ಲದ ಬಾಷೆಗಳು,

ಹಾಗಿದ್ದರೂ ಉರ್ದು – ಅರಬಿಕ್ ಭಾಷೆ – ಸಾಹಿತ್ಯಕ್ಕಿಲ್ಲದ ವಿರೋಧ ಸಂಸ್ಕೃತಕ್ಕೆ ಮಾತ್ರ ಯಾಕೆ  ಎಂದು ಅವರು ಪ್ರಶ್ನಿಸಿದ್ದಾರೆ.

ಕನ್ನಡದ ಹೆಸರಿನಲ್ಲಿ ಭಾರತವೆಂಬ ಭಾವನೆಯಿಂದ ಕರ್ನಾಟಕವನ್ನು ಕಳಚುವು ಷಡ್ಯಂತ್ರವೆ ಅಥವಾ ತಮಿಳುನಾಡಿನಲ್ಲಿ ನಡೆದ ದ್ರಾವಿಡ ಹೋರಾಟ ಇನ್ನೊಂದು ಮುಖವಾಡವೆ ಇದು ಖಾರವಾಗಿ ಪ್ರಶ್ನಿಸಿದ್ದಾರೆ.

ಒಂದು ವಿಷಯದ ಗಂಭೀರ ಚರ್ಚೆಗೆ ಅದರ ಅಧ್ಯಯನ ಸಂಸ್ಕೃತ ತಳಸ್ಪರ್ಶಿ ಅರಿವು ಅಗತ್ಯ.

ಈಗ ವಿಶ್ವವಿದ್ಯಾಲಯ ಸ್ಥಾಪನೆಗೆ ಸರಕಾರ ಮುಂದಾಗಿರುವದರ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ. ಸಂಸ್ಕೃತ ಇಲ್ಲದೆ ಕನ್ನಡ ಭಾಷೆ ಇಲ್ಲ, ಭಾಷಣವಿಲ್ಲ ಪ್ರತಿಭಟನೆ ಇಲ್ಲ, ಆಕ್ರೋಶವಿಲ್ಲ,ರಕ್ಷಣಾ ವೇದಿಕೆಯೂ ಇಲ್ಲ. ಘಟಕವೂ ಇಲ್ಲ.

ವಿರೋಧವಲ್ಲ ಆಭಿಯಾನವೂ ಇಲ್ಲ. ಇನ್ನು ಆರೋಗ್ಯವೂ ಇಲ್ಲ ಪುಸ್ತಕವು ಇಲ್ಲ. ವಿದ್ಯಾಭ್ಯಾಸವೂ ಇಲ್ಲ ಉದ್ಯೋಗವಿಲ್ಲ. ಜನನ ಮರಣಗಳೂ ಇಲ್ಲ.

ಹೀಗಾಗಿ ಕನ್ನಡ ಹಾಗೂ ಸಂಸ್ಕೃತ ಎಂದು ಗದ್ದಲ ಎಬ್ಬಿಸುವುದನ್ನು ಕೈಬಿಡಬೇಕು ಎಂದು ‌ವಿಕ್ರಂ ಅಯ್ಯಂಗಾರ್ ಒತ್ತಾಯಿಸಿದ್ದಾರೆ.