ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ:ದರ್ಶನ್ ಅಂಗಾಂಗ ದಾನ

ಮೈಸೂರು: ಮೈಸೂರಿನ ಬಿಜಿಎಸ್ ಅಪೊಲೊ ಆಸ್ಪತ್ರೆಯಿಂದ  ಚೆನ್ನೈಗೆ ಜೀವಂತ ಹೃದಯ ರವಾನೆ ಮಾಡಲಾಗಿದೆ.

ಅಪಘಾತದಲ್ಲಿ ಗಂಭಿರ ಗಾಯಗೊಂಡಿದ್ದ 24 ವರ್ಷದ ದರ್ಶನ್ ಅಂಗಾಂಗ ದಾನ ಮಾಡಿದ್ದಾರೆ.

ಅಪೊಲೊ ಆಸ್ಪತ್ರೆಯಿಂದ ಗ್ರೀನ್ ಕಾರಿಡಾರ್ ವ್ಯವಸ್ಥೆಯಲ್ಲಿ ಆಂಬುಲೆನ್ಸ್ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಜೀವಂತ ಹೃದಯವನ್ನು ರವಾನಿಸಲಾಯಿತು.

ನಂತರ ಅಲ್ಲಿಂದ ಚೆನ್ನೈಗೆ ಏರ್ ಲಿಫ್ಟ್ ಮಾಡುವ ಮೂಲಕ ಚೆನ್ನೈನ ಎಂ.ಜಿ.ಎಂ ಹೆಲ್ತ್ ಕೇರ್ ಗೆ ಜೀವಂತ ಹೃದಯ ರವಾನೆ ಮಾಡಲಾಗಿದೆ.

ಜ.18ರಂದು ರಸ್ತೆ ಅಪಘಾತವಾಗಿ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಪಘಾತದಿಂದ ಯುವಕನ ಮೆದುಳು ನಿಷ್ಕ್ರಿಯ ಆಗಿತ್ತು.

ಈ ಹಿನ್ನೆಲೆಯಲ್ಲಿ ಯುವಕನ ಕುಟುಂಬದವರು ಅಂಗಾಂಗ ದಾನಕ್ಕೆ ಮುಂದಾದರು.

ಅಪಘಾತದಲ್ಲಿ ಮೆದುಳು ನಿಕ್ರಿಯೆ ಗೊಂಡಿದ್ದ ದರ್ಶನ್ ಮೈಸೂರಿನ ಬೆಳವಾಡಿಯಲ್ಲಿ ಎಲೆಕ್ಟ್ರಿಕಲ್ ಕೆಲಸ ನಿರ್ವಹಿಸುತ್ತಿದ್ದರು.

ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ದರ್ಶನ್ ಗೆ ಎರಡು ತಿಂಗಳ ಮಗು ಇತ್ತು.

ದರ್ಶನ್ ನಿಧನ ನಂತರ ಆರು ಜನರ ಬಾಳಿಗೆ ಬೆಳಕಾಗಿದ್ದಾರೆ.